ಹಾಯ್ ಬೆಂಗಳೂರ್

ನಾಳೆಯಿಂದ ರಾಜ್ಯದ್ಯಾಂತ ‘ಯುವರತ್ನ’ ಹವಾ ಶುರು

ನಾಳೆಯಿಂದ ರಾಜ್ಯಾದ್ಯಂತ ಪುನೀತ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಹೆಚ್ಚೂ ಕಮ್ಮಿ ಎರಡು ವರ್ಷಗಳ ಬಳಿಕ ಪವರ್ ಸ್ಟಾರ್ ನ ತೆರೆ ಮೇಲೆ ಕಾಣುತ್ತಿದ್ದಾರೆ. ಹೌದು, ಬಹು ನಿರೀಕ್ಷಿತ ‘ಯುವರತ್ನ’ ನಾಳೆ ತೆರೆ ಕಾಣುತ್ತಿದೆ. ರಾಜ್ಯಾದ್ಯಂತ ಸುಮಾರು ಐನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲೆಲ್ಲಾ ಬೆಳಗ್ಗೆ ಆರು ಗಂಟೆಯಿಂದಲೇ ಪ್ರದರ್ಶನ ಆರಂಭವಾಗಲಿದೆ.

ಈಗಾಗಲೇ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ (ಸಿಲ್ವರ್ ಜ್ಯೂಬಿಲಿ) ಮತ್ತು ರಾಜಕುಮಾರ (ಶತದಿನ) ದಂಥ ಎರಡು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ‘ಯುವರತ್ನ’ದ ನಿರ್ದೇಶಕರಾಗಿದ್ದು ಹ್ಯಾಟ್ರಿಕ್ ಕನಸು ಕಾಣುತ್ತಿದ್ದಾರೆ.

ಪುನೀತ್ ಕೂಡ ಚೆನ್ನಾಗಿ ವರ್ಕ್ ಔಟ್ ಮಾಡಿ ಫಿಟ್ ಅಂಡ್ ಫೈನ್ ಆಗಿ ಕಾಣಿಸುತ್ತಿದ್ದಾರೆ. ನಾಲ್ಕು ವರ್ಷಗಳ ಗ್ಯಾಪ್ ಬಳಿಕ ಮೂರನೇ ಚಿತ್ರ ಕೊಡುತ್ತಿರುವ ಸಂತೋಷ್ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ವಿಭಿನ್ನ ಶೈಲಿಯಲ್ಲಿ ಕಾಣಲು ಕಾತುರದಿಂದ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *