ಹಾಯ್ ಬೆಂಗಳೂರ್

ಮನೆಯಿಂದಲೇ ಕೆಲಸ ಮಾಡಲು ಸುಪ್ರೀಂಕೋರ್ಟ್ ಜಡ್ಜ್ ಗಳು ತೀರ್ಮಾನಿಸಿದ್ದೇಕೆ?

ನಿಜಕ್ಕೂ ಮತ್ತೊಂದು ಸುತ್ತಿನ ದರಿದ್ರ ಕಾಲ ಕೊರೋನಾ ಎರಡನೇ ಅಲೆ ಮೂಲಕ ಆರಂಭವಾಗಿಬಿಟ್ಟಿದೆ. ಸುಪ್ರೀಂಕೋರ್ಟ್ ನ ಶೇ. 50ರಷ್ಟು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಇರೋದು ಧೃಡವಾಗಿದೆ. ಹೀಗಾಗಿ ಎಲ್ಲ ಜಡ್ಜ್ ಗಳು ತಮ್ಮ ತಮ್ಮ ಮನೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲಸ ಮಾಡಲು ನಿರ್ಧಾರ ಮಾಡಿದ್ದಾರೆ.

ಇದೀಗ ಇಡೀ ಸುಪ್ರೀಂ ಕೋರ್ಟ್ ಪ್ರತಿ ಜಾಗ, ಬೆಂಚು, ಟೇಬಲ್ ಎಲ್ಲವನ್ನೂ ಸ್ಯಾನಿಟೈಜ್ ಮಾಡಲಾಗುತ್ತಿದೆ. ಸೋಮವಾರ ಬೆಳಗ್ಗೆ ವಕೀಲರು ಮತ್ತ ಬೇರೆ ಸಿಬ್ಬಂದಿಗಳು ಕೆಲಸ ಆರಂಭಿಸುವುದಕ್ಕೂ ಒಂದು ಗಂಟೆ ಮೊದಲು ಬೆಂಚ್ ಗಳನ್ನು ತಂದು ಜೋಡಿಸಲಾಗುತ್ತದೆ.

ಸಿಬ್ಬಂದಿಗಳಿಗೆ ಈ ರೀತಿ ಇದ್ದಕ್ಕಿದ್ದಂತೆ ಕೋವಿಡ್ ಸೋಂಕು ತಗುಲಿರುವುದರಿಂದ ಕಳೆದ ವರ್ಷದಂತೆಯೇ ಪರಿಸ್ಥಿತಿ ನಿರ್ಮಾಣವಾಗಬಾರದು ಅಂತ ಜಡ್ಜ್ ಗಳೆಲ್ಲರೂ ಮನೆಯಿಂದಲೇ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಜಡ್ಜ್ ಗಳು ಈಗ ತೆಗೆದುಕೊಂಡಿರುವ ನಿರ್ಧಾರವೇ ಸರಿಯಾಗಿದೆ. ಯಾಕೆಂದರೆ ಪ್ರತಿನಿತ್ಯ ವಿಚಾರಣೆ ಮಾಡುವಾಗ ಸಾವಿರಾರು ಸಂಖ್ಯೆಯಲ್ಲಿ ಜನರು ಕೋರ್ಟ್ ಹಾಲ್ ನಲ್ಲಿ ಹಾಜರಾಗಿರುತ್ತಿದ್ದರು. ಆದರೆ ಈಗ ಹಾಗಲ್ಲ. ಯಾವ ಕೇಸ್ ಇರುತ್ತದೋ ಆ ಕೇಸ್ ಗೆ ಸಂಬಂಧಪಟ್ಟವರು ಮತ್ತು ಆ ಕೇಸ್ ನ ನಡೆಸುತ್ತಿರೋ ವಕೀಲರು ಮಾತ್ರ ಹಾಜರಾಗಿರುತ್ತಾರೆ. ಇದರಿಂದ ಸೋಂಕು ಹರಡುವುದನ್ನು ಆದಷ್ಟು ಕಡಿಮೆ ಮಾಡಬಹುದು ಎಂಬ ಕಾರಣಕ್ಕೆ ಜಡ್ಜ್ ಗಳೆಲ್ಲಾ ಸೇರಿಕೊಂಡು ಮನೆಯಿಂದಲೇ ವಿಚಾರಣೆ ನಡೆಸೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಒಟ್ಟಿನಲ್ಲಿ ಈ ಕೊರೋನಾ ಎರಡನೇ ಅಲೆ ಇನ್ನೂ ಎಷ್ಟು ದಿನ ಇರುತ್ತದೋ ಎಷ್ಟು ಮಂದಿಯನ್ನು ನುಂಗಿ ನೀರು ಕುಡಿಯುತ್ತದೋ ಆ ದೇವರೇ ಬಲ್ಲ. ಇಷ್ಟಾದರೂ ಯಾವ ದೇಶಗಳಿಗೂ ಚೀನಾದ ಮೇಲೆ ಕ್ರಮ ತೆಗೆದುಕೊಳ್ಳುವ ಸಾಮರ್ಥ್ಯ ಇಲ್ಲ. ಸುಮ್ಮನೆ ನಮ್ಮ ರಕ್ಷಣಾ ಇಲಾಖೆಯವರು ಸಾವಿರಾರು ಕೋಟಿ ಸುರಿಯುತ್ತಿದ್ದಾರೆ. ಅದರ ಬದಲು ಇಂಥದ್ದೊಂದು ವೈರಸ್ ನ ಹುಟ್ಟು ಹಾಕಿ ಚೀನಾದೊಳಕ್ಕೆ ಬಿಟ್ಟುಬಿಟ್ಟರೆ ಇಡೀ ಚೀನಾವನ್ನು ನುಂಗಿ ನೊಣೆದು ಹಾಕಬಹುದು.

Leave a Reply

Your email address will not be published. Required fields are marked *