ಹಾಯ್ ಬೆಂಗಳೂರ್

ನಿಜಕ್ಕೂ ರಮೇಶ್ ಜಾರಕಿಹೊಳಿ ಆಸ್ಪತ್ರೆಗೆ ದಾಖಲಾಗಿದ್ದೇಕೆ?

ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ಸೀಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ವಿಶೇಷ ತನಿಖಾ ತಂಡದ ಮುಂದೆ ವಿಚಾರಣೆಗೆ ಅಂತ ರಮೇಶ್ ಹಾಜರಾಗಬೇಕಿತ್ತು. ಆದರೆ ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಕೊರೋನಾ ಸೋಂಕಿದೆ ಅಂತ ಸಾಹುಕಾರ್ರು ವಿಚಾರಣೆಯಿಂದ ಪಾರಾಗಲು ಯತ್ನಿಸಿದ್ದಾರೆ.

ರಮೇಶ್ ಜಾರಕಿಹೊಳಿಗೆ ನಿನ್ನೆ ರಾತ್ರಿ ಉಸಿರಾಟದ ತೊಂದರೆ ಉಂಟಾಗಿತ್ತು. ಇದಲ್ಲದೆ ಶುಗರ್ ಮತ್ತು ರಕ್ತ ಒತ್ತಡದ ಸಮಸ್ಯೆ ಕೂಡ ಎದುರಾಗಿತ್ತು. ಹೀಗಾಗಿ ನಿನ್ನೆ ರಾತ್ರಿಯೇ ಅವರನ್ನು ಗೋಕಾಕ್ ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಅಸಲಿಗೆ ರಮೇಶ್ ಜಾರಕಿಹೊಳಿ ಕೊರೊನಾ ಸೋಂಕು ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಇನ್ನೂ ಐದು ದಿನಗಳ ಕಾಲ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದು ಗೋಕಾಕ್ ನ ತಾಲೂಕು ವೈದ್ಯಾಧಿಕಾರಿ ಡಾ.ರವೀಂದ್ರ ಹೇಳಿದ್ದಾರೆ. ಆದರೆ ಇದೆಲ್ಲಾ ಸುಳ್ಳು, ಕೊರೊನಾ ಸೋಂಕು ಇವರಿಗೆ ನೆಪ ಮಾತ್ರ. ಎಸ್.ಐ.ಟಿ ಮುಂದೆ ಹಾಜರಾಗಲು ರಮೇಶ್ ಜಾರಕಿಹೊಳಿ ಮಾಡಿರುವ ಕುತಂತ್ರ ಅಂತ ಕಾಂಗ್ರೆಸ್ಸಿಗರು ಟೀಕೆ ಮಾಡಿದ್ದಾರೆ.

ಇದೇ ವೇಳೆ ಸೀಡಿ ಲೇಡಿಯ ತಾಯಿ ಕೂಡ ಮಾನಸಿಕ ಒತ್ತಡದಲ್ಲಿದ್ದಾರೆ. ಸರಿಯಾಗಿ ಆಹಾರ ಸೇವನೆ ಮಾಡದೆ ಬೀಪಿ ಮತ್ತು ಶುಗರ್ ಹೆಚ್ಚಾಗಿರುವ ಕಾರಣ ಅನಾರೋಗ್ಯ ನಿಮಿತ್ತ ಆಕೆಯನ್ನು ಕೂಡ ಬಿಜಾಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *