ಹಾಯ್ ಬೆಂಗಳೂರ್

ಟಿ-20 ವಿಶ್ವಕಪ್ ಯಾವಾಗ ನಡೆಯುತ್ತೆ ಮತ್ತು ಭಾರತೀಯ ಆಟಗಾರರ ಬಗ್ಗೆ ಗಂಗೂಲಿ ಹೇಳಿದ್ದೇನು?

ಇತ್ತೀಚೆಗಷ್ಟೇ ಹಾರ್ಟ್ ಪ್ರಾಬ್ಲಂನಿಂದ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ಸೌರವ್ ಗಂಗೂಲಿ ಅದ್ಭುತ ರೀತಿಯಲ್ಲಿ ಚೇತರಿಸಿಕೊಂಡು ಹೊರಕ್ಕೆ ಬಂದಿದ್ದಾರೆ. ಅವರ ದೃಷ್ಟಿಯೆಲ್ಲಾ ಇವತ್ತಿನಿಂದ ಆರಂಭವಾಗುವ ಐಪಿಎಲ್ ಮೇಲೆಯೇ ಇದೆ. ಐಪಿಎಲ್ ಮುಗಿಯುತ್ತಿದ್ದಂತೆಯೇ ನಾಲ್ಕ್ದೈದು ತಿಂಗಳ ಗ್ಯಾಪ್ ನಲ್ಲಿ ಟಿ-20 ವಿಶ್ವಕಪ್ ಬರುತ್ತದೆ. ಅದು ಇಂಡಿಯಾದಲ್ಲೇ ನಡೆಯುತ್ತದೆಯಾದ್ದರಿಂದ ಆಯೋಜನೆ ಚೆನ್ನಾಗಿರಬೇಕು. ಯಾವುದೇ ಲೋಪದೋಷಗಳು ಉಂಟಾಗಬಾರದು.

ಈ ಬಾರಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ನಡೆಯುವ ಟಿ-20 ವಿಶ್ವಕಪ್ಪನ್ನು ಅತ್ಯಂತ ಅದ್ಭುತ ಮತ್ತು ಸುರಕ್ಷಿತ ರೀತಿಯಲ್ಲಿ ಆಯೋಜಿಸಲಾಗುವುದು ಅಂತ ಬಿ.ಸಿ.ಸಿ.ಐ. ಅಧ್ಯಕ್ಷ ಸೌರವ್ ಗಂಗೂಲಿ ಭರವಸೆ ನೀಡಿದ್ದಾರೆ. ಈ  ಕುರಿತು ಅವರು ಎಲ್ಲ ರಾಜ್ಯಗಳ ಕ್ರಿಕೆಟ್ ಬೋರ್ಡ್ ನ ಪ್ರೆಸಿಡೆಂಟ್ ಗಳಿಗೆ ಪತ್ರ ಬರೆದಿದ್ದಾರೆ.

ಮುಂಬರುವ ಸೀಸನ್ ನಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಮತ್ತು ಟಿ-20 ವಿಶ್ವಕಪ್ ಆಯೋಜನೆ ಮಾಡಲು ಹೇಳಿ ಮಾಡಿಸಿದ ಹಾಗಿದೆ ಅಂತ ಹೇಳಿರುವ ಗಂಗೂಲಿ, ಇದೇ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಎಲ್ಲವೂ ಸರಿಯಾಗಿದ್ದರೆ ಹತ್ತೊಂಬತ್ತು ವರ್ಷಕ್ಕಿಂತ ಕೆಳಗಿರುವ ಹುಡುಗರಿಗೆ ಟೂರ್ನಮೆಂಟ್ ಗಳನ್ನು ಕೂಡ ಆಯೋಜಿಸಲಾಗುವುದು ಅಂತ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್ ತಂಡವಂತೂ ಇತ್ತೀಚೆಗೆ ನಡೆದ ಎರಡು ಸರಣಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಒಂದು ವರ್ಷದ ಗ್ಯಾಪ್ ಬಳಿಕ ಕೂಡ ಅದೇ ಗುಣಮಟ್ಟ ಮತ್ತ ಫಿಟ್ನೆಸ್ಸನ್ನು ಆಟಗಾರರು ಕಾಪಾಡಿಕೊಂಡಿದ್ದಾರೆ ಅಂತ ಗಂಗೂಲಿ ಹೊಗಳಿದ್ದಾರೆ.

Leave a Reply

Your email address will not be published. Required fields are marked *