ಹಾಯ್ ಬೆಂಗಳೂರ್

ಕೆ.ಜಿ.ಎಫ್ 2 ಶೂಟಿಂಗ್ ಮುಗಿದ ಮೇಲೆ ಯಶ್ ಈಗ ಏನು ಮಾಡುತ್ತಿದ್ದಾರೆ?

ಕೆ.ಜಿ.ಎಫ್ ಛಾಪ್ಟರ್ 2 ಶೂಟಿಂಗ್ ಮುಕ್ತಾಯವಾದ ಮೇಲೆ ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಯಾವುದೇ ಪ್ರಾಜೆಕ್ಟ್ ಗೂ ಕೈ ಹಾಕಿಲ್ಲ. ಹೀಗಾಗಿ ಮುಂದಿನ ಚಿತ್ರ ಯಾವುದು ಎಂಬುದು ಇನ್ನೂ ಅನೌನ್ಸ್ ಆಗಿಲ್ಲ. ಈ ಮಧ್ಯೆ ಕೆಲ ದಿನಗಳ ಕಾಲ ಹಾಯಾಗಿ ಪ್ರಕೃತಿ ಮಡಿಲಲ್ಲಿ ಕಾಲ ಕಳೆಯೋಣ ಅಂತ ಯಶ್ ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಅವರು ತಮ್ಮ ಫಾರಂ ಹೌಸ್ ಗೆ ಬಂದಿದ್ದಾರೆ. ಸ್ವತಃ ತಾವೇ ಮುಂದೆ ನಿಂತು ಅಲ್ಲಿ  ಕೆಲಸ ಮಾಡಿಸುತ್ತಿದ್ದಾರೆ.

ವಿಶಾಲವಾದ ಪ್ರದೇಶದಲ್ಲಿ ಒಂದು ಕೆರೆಯನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಅವರು ಹೊಂದಿದ್ದು ಇದರಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರು ಮತ್ತ ಜಾನುವಾರುಗಳಿಗೆ ಬಹಳ ಉಪಯೋಗವಾಗಲಿದೆ. ಸುತ್ತಮುತ್ತಲಿನ ರೈತರು ಕೂಡ ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನೂ ಸಿದ್ಧವಾಗುತ್ತಿರುವ ಫಾರಂ ಹೌಸ್ ಗೆ ಭೇಟಿ ನೀಡಿ ಅಲ್ಲಿನ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿರುವ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದ ಹಾಗೆ ಲಕ್ಷಾಂತರ ಸಂಖ್ಯೆಯಲ್ಲಿ ಲೈಕ್ ಗಳು ಬಂದಿವೆ. ಸಾವಿರಾರು ಸಂಖ್ಯೆಯಲ್ಲಿ ಕಾಮೆಂಟ್ ಗಳು ಬಂದಿವೆ.

Leave a Reply

Your email address will not be published. Required fields are marked *