ಹಾಯ್ ಬೆಂಗಳೂರ್

ಪಶ್ಚಿಮ ಬಂಗಾಳ: ಪೋಲಿಂಗ್ ಬೂತ್ ಎದುರು ನಡೆದ ಗುಂಡಿನ ದಾಳಿಗೆ ನಾಲ್ವರು ಬಲಿ

ಪಶ್ಚಿಮ ಬಂಗಾಳದ ಸೀತಾಳಕುಚಿ ಪ್ರದೇಶದಲ್ಲಿ ನಾಲ್ವರು ಗುಂಡೇಟಿಗೆ ಬಲಿಯಾಗಿದ್ದಾರೆ. ಪೋಲಿಂಗ್ ಬೂತ್ ಮುಂದೆ ನಿಂತಿದ್ದ ಸಿಐಎಸ್ಎಫ್ ಯೋಧರ ರೈಫಲ್ಲನ್ನು ಕಸಿದುಕೊಳ್ಳಲು ಈ ನಾಲ್ವರು ಕಿಡಿಗೇಡಿಗಳು ಮುಂದಾದ ಕೂಡಲೇ ಎಚ್ಚೆತ್ತುಕೊಂಡ ಯೋಧರು ಬಂದೂಕಿನಿಂದ ಫೈರ್ ಮಾಡಿದರು.

ಕೆಲ ದುಷ್ಕರ್ಮಿಗಳು ಬೇಕಂತಲೆ ಮತದಾರರನ್ನು ಬೂತ್ ಕಡೆಗೆ ಹೋಗದಂತೆ ತಡೆಯುತ್ತಿದ್ದರು. ಈ ವೇಳೆ ಒಬ್ಬ ಮತದಾರ ಗಾಯಗೊಂಡು ಅಲ್ಲೇ ಕುಸಿದು ಬಿದ್ದ. ಆಗ ಭದ್ರತಾ ಪಡೆಯವರು ಆ ದುಷ್ಕರ್ಮಿಗಳ ಮೇಲೆ ಫೈರ್ ಮಾಡತೊಡಗಿದರು. ಐದು ಸುತ್ತಿನ ಗುಂಡಿನ ದಾಳಿಯನ್ನು ನಡೆಸಿದರು. ಕೂಡಲೇ ಅಲ್ಲಿಗೆ ಮಥಬಂಗಾ ಠಾಣೆಯ ಪೊಲೀಸರು ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಈ ಘಟನೆಯನ್ನು ಖಂಡಿಸಿದ ಪಶ್ಚಿಮ ಬಂಗಾಳದ ಸಿಎಂ ಹಾಗೂ ತೃಣಮೂಲ ಕಾಂಗ್ರೆಸ್ ನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಯಾವುದು ನಡೆಯಬಾರದಾಗಿತ್ತೋ ಅದು ಇವತ್ತು ನಡೆದು ಹೋಯಿತು ಅಂತ ಘಟನೆಯನ್ನು ಖಂಡಿಸಿದರು.

ಘಟನೆಯ ಕುರಿತು ವಿವರವಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಅಚ್ಚರಿ ಏನಪ್ಪಾ ಅಂದರೆ ಘಟನೆ ನಡೆದಾಗ ಸ್ಥಳದಲ್ಲಿ ಒಬ್ಬೇ ಒಬ್ಬ ಪೊಲೀಸ್ ಸಹ ಇರಲಿಲ್ಲ.

Leave a Reply

Your email address will not be published. Required fields are marked *