ಹಾಯ್ ಬೆಂಗಳೂರ್

ಬಿಜೆಪಿ ರಾಜ್ಯ ಉಸ್ತುವಾರಿಯಿಂದ ಯಡವಟ್ಟು ಯತ್ನಾಳ್ ಗೆ ವಾರ್ನಿಂಗ್

ಬಸನಗೌಡ ಪಾಟೀಲ ಯತ್ನಾಳ್….. ಈ ಹೆಸರು ಕೇಳಿದರೆ ಸಾಕು ವಿರೋಧ ಪಕ್ಷದವರಿಗಿಂತ ಮೊದಲು ಬಿಜೆಪಿಯವರೇ ಹೆದರುತ್ತಾರೆ. ಯಾವಾಗ ಎಲ್ಲಿ ಏನು ಹೇಳಿ ನಮ್ಮ ಮಾನವನ್ನು ಮೂರು ಕಾಸಿಗೆ ಹರಾಜು ಹಾಕುತ್ತಾನೋ ಅಂತ ಅನೇಕ ರಾಜಕೀಯ ನಾಯಕರು ಈಯಪ್ಪನನ್ನು ಕೆಣಕುವುದಕ್ಕೆ ಹೋಗೋದಿಲ್ಲ. ಆ ರೀತಿ ಹವಾ ಮೇಂಟೇನ್ ಮಾಡಿದ್ದಾನೆ ಈ ಫೈರ್ ಬ್ರ್ಯಾಂಡ್ ಶಾಸಕ.

ಈ ಮಧ್ಯೆ ಹೊಸದೊಂದು ಬೆಳವಣಿಗೆ ನಡೆದಿದೆ. ಯತ್ನಾಳ್ ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ. ಅವನಿಗೆ ನಮ್ಮ ಪಕ್ಷದ ನಾಯಕರ ಬಗ್ಗೆ ಕಿಂಚಿತ್ತೂ ಗೌರವವಿಲ್ಲ. 000.01 ಪರ್ಸೆಂಟ್ ನಷ್ಟು ನಾವು ಅವನನ್ನು ನಂಬೋದಿಲ್ಲ. ಹೀಗಾಗಿ ಅವನಿಗೆ ನೋಟಿಸ್ ನೀಡಿದ್ದೇವೆ. ಅಲ್ಲದೆ ಸದ್ಯದಲ್ಲೇ ಆತನನ್ನು ಪಕ್ಷದಿಂದ ಹೊರಕ್ಕೆ ಹಾಕುತ್ತೇವೆ ಅಂತ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಳಗಾವಿಯಲ್ಲಿ ಹೇಳಿದ್ದಾರೆ.

ಬಿಜೆಪಿ ನಾಯಕರೇ ಯತ್ನಾಳ್ ಬಗ್ಗೆ ಹೀಗೆ ಹೇಳಿರೋದ್ರಲ್ಲಿ ನಯಾ ಪೈಸೆ ಆಶ್ಚರ್ಯವಿಲ್ಲ. ಯಾಕೆಂದರೆ ಆಯಪ್ಪ ಹಾಗೆ ಆಡುತ್ತಾನೆ. ಯಾರೆಂದರೆ ಅವರನ್ನು ಮುಲಾಜಿಲ್ಲದೆ ಹಂಗಿಸಿಬಿಡುತ್ತಾನೆ. ತನ್ನ ಮಾತಿನಿಂದ ಮತ್ತೊಬ್ಬರಿಗೆ ನೋವಾಗುತ್ತದೆ ಅಂತ ಕಿಂಚಿತ್ತೂ ಯೋಚಿಸೋದಿಲ್ಲ.

ಈಗ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೀಡಿರೋ ಹೇಳಿಕೆಗೆ ಅತ್ತಿಂದ ಯಾವ ರೀತಿಯಾದ ಪ್ರತಿಕ್ರಿಯೆ ಬರುತ್ತದೋ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *