ಹಾಯ್ ಬೆಂಗಳೂರ್

ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಸಾರ್ವಜನಿಕ ಗ್ರಂಥಾಲಯದಿಂದ ವಿಶೇಷ ಕೊಡುಗೆ

ಇಂದು ವಿಶ್ವ ಪುಸ್ತಕದ ದಿನ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಗ್ರಂಥ ಇಲಾಖೆಯು ರಾಜ್ಯದ ಎಲ್ಲ ಜಿಲ್ಲ ಹಾಗೂ ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಮಹಾನ್ ವ್ಯಕ್ತಿಗಳ ಕೃತಿಗಳನ್ನು ಪ್ರದರ್ಶನ ಮಾಡಲಿದೆ. ಆ ಮೂಲಕ ಕೃತಿಕಾರರಿಗೆ ವಿಶೇಷವಾಗಿ ಗೌರವವನ್ನು ಸಲ್ಲಿಸುತ್ತಿದೆ. ಇದು ನಿಜಕ್ಕೂ ವಿಶ್ವ ಪುಸ್ತಕದ ದಿನವನ್ನು ವಿಭಿನ್ನವಾಗಿ ಆಚರಿಸುವ ಬಗೆಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪುಸ್ತಕ ಪ್ರದರ್ಶನವಷ್ಟೇ ಅಲ್ಲದೆ ಆನ್ ಲೈನ್ ಮೂಲಕ ಕತೆ ಹೇಳುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಾವಗೀತೆ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನೂ ಕೂಡ ಹಮ್ಮಿಕೊಳ್ಳಲಾಗಿದೆ.

ಪುಸ್ತಕವಷ್ಟೇ ಅಲ್ಲದೆ ಆಲ್ ಇಂಡಿಯಾ ರೇಡಿಯೋ, ಬೆಂಗಳೂರು ಸ್ಟೇಷನ್ನಿನಲ್ಲಿ ಸಂಗ್ರಹವಾಗಿರುವ ಇ-ಆಡಿಯೋ ಪುಸ್ತಕ, ಯೂಟ್ಯೂಬ್ ಲಿಂಕ್ ಗಳು, ಆಡಿಯೋ ಕ್ಲಿಪ್ಪಿಂಗ್ ಗಳು, ರೂಪಕಗಳು, ಕಥೆ, ನಾಟಕಗಳು, ಉಪನ್ಯಾಸ ಹಾಗೂ ಹಾಡುಗಳನ್ನು ಡಿಜಿಟಲ್ ಜಾಲತಾಣದಲ್ಲಿ ಅಳವಡಿಸಲಾಗಿದೆ.

ಒಟ್ಟಾರೆಯಾಗಿ ಓದುಗರಿಗೆ ಇದೊಂದು ಉತ್ತಮ ವೇದಿಕೆಯಾಗಿದ್ದು ನಾಲ್ಕು ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಲಭ್ಯ ಇವೆ.

Leave a Reply

Your email address will not be published. Required fields are marked *