ಹಾಯ್ ಬೆಂಗಳೂರ್

ಉತ್ತರ ಪ್ರದೇಶ ಬಿಜೆಪಿ ಮುಖಂಡ ಕೊರೋನಾಗೆ ಬಲಿ

ಉತ್ತರ ಪ್ರದೇಶದ ಬಿಜೆಪಿ ಮುಖಂಡ ಹನುಮಾನ್ ಮಿಶ್ರಾ ಕೋವಿಡ್ ಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರ ನಂತರ ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಈ ಬೆನ್ನಲ್ಲೇ ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡಲು ಉತ್ತರ ಪ್ರದೇಶದ ಸರ್ಕಾರ ನಿರ್ಧರಿಸಿದೆ.

ಲಾಕ್ ಡೌನ್ ಅಂದರೆ ಪೂರ್ತಿ ಅಲ್ಲ, ಬರೀ ವೀಕೆಂಡ್ ಗಳಲ್ಲಿ ಮಾತ್ರ ಅಷ್ಟೆ. ಒಂದು ವೇಳೆ ಇದಕ್ಕೂ ಕೋವಿಡ್ ಜಗ್ಗಲಿಲ್ಲ ಅಂದರೆ ಆಗ ಪೂರ್ತಿ ಲಾಕ್ ಡೌನ್ ಮಾಡೋದೊಂದೇ ಆಯ್ಕೆ. ನಮ್ಮಲ್ಲಿ ಇನ್ನೂ ಏನು ಮಾಡುತ್ತಾರೋ ಗೊತ್ತಿಲ್ಲ. ಅತ್ತ ಜಾರ್ಖಂಡ್ ನಲ್ಲಿ ಏಪ್ರಿಲ್ 22 ರಿಂದ ಏಪ್ರಿಲ್ 29ರ ತನಕ ಸಂಪೂರ್ಣ ಲಾಕ್ ಡೌನ್ ಅಂತ ಸರ್ಕಾರ ಘೋಷಿಸಿಬಿಟ್ಟಿದೆ.

Leave a Reply

Your email address will not be published. Required fields are marked *