ಹಾಯ್ ಬೆಂಗಳೂರ್

ಬಗೆಹರಿಯದ ಚೈತ್ರಾ ಕೋಟೂರ್ ಸಮಸ್ಯೆ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಚೈತ್ರಾ ಕೊಟೂರ್ ಎಂಬ ಮಾಜಿ ಬಿಗ್ ಬಾಸ್ ಸ್ಪರ್ಧಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಕಳೆದ ವಾರ ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಸ್ಥಾನದಲ್ಲಿ ನಾಗಾರ್ಜುನ ಎಂಬ ಉದ್ಯಮಿ ಜೊತೆಗೆ ಈಕೆಯ ವಿವಾಹವಾಗಿತ್ತು.

ತಾಳಿ ಕಟ್ಟಿದ ಕೆಲವೇ ಗಂಟೆಗಳಲ್ಲಿ ಇವರ ದಾಂಪತ್ಯ ಜೀವನದಲ್ಲಿ ಒಡಕು ಮೂಡಿತ್ತು. ಈ ಮಧ್ಯೆ ಆಕೆಯ ಪತಿ ನಾಗಾರ್ಜುನ ಏನೇನೋ ಹೇಳಿದ್ದ. ಇದು ಬೆದರಿಕೆ ಮದುವೆ, ಕೆಲ ಕನ್ನಡಪರ ಸಂಘಟನೆಯವರು ನನ್ನನ್ನು ಬಲವಂತವಾಗಿ ಈಕೆಗೆ ಗಂಟು ಹಾಕಿದ್ದಾರೆ ಅಂತ ವಿಚಿತ್ರ ಹೇಳಿಕೆ ನೀಡಿದ್ದ.

ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ನಂತರ ರಾಜಿ ಮೂಲಕ ಪರಿಹಾರ ಮಾಡಿಕೊಳ್ಳೋಣ ಅಂತ ನಾಗಾರ್ಜುನನ ಮನೆಯವರು ತಮ್ಮ ಊರು ಮಂಡ್ಯಕ್ಕೆ ಎಸ್ಕೇಪ್ ಆಗಿದ್ದರು. ಅಂದು ಹೋದವರು ಇಲ್ಲೀ ತನಕ ಪತ್ತೆಯಿಲ್ಲ ಅಂತ ನೊಂದುಕೊಂಡ ಚೈತ್ರ ವಿಷ ಸೇವಿಸಿ ಸಾಯಲು ಯತ್ನಿಸಿದ್ದಾಳೆ. ಸದ್ಯ ಆಕೆಯನ್ನು ಕೋಲಾರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *