ಹಾಯ್ ಬೆಂಗಳೂರ್

ಪೈಲಟ್ ಯಡವಟ್ಟು ಮಾಡಿದನಾದರೂ ಅದೃಷ್ಟವಶಾತ್ ನೂರಾರು ಪ್ರಯಾಣಿಕರು ಬಚಾವ್

ಆಸ್ಟ್ರೇಲಿಯಾದ ಸಿಡ್ನಿ ಏರ್ ಪೋರ್ಟ್ ನಲ್ಲಿ ಇಂದು ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ. ಸಣ್ಣದೊಂದು ಗೊಂದಲದಿಂದ ಎರಡು ಪ್ಯಾಸೆಂಜರ್ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆಯಬೇಕಿತ್ತು. ಆದರೆ ಕಡೇ ಕ್ಷಣದಲ್ಲಿ ಪೈಲಟ್ ಗಳು ಎಚ್ಚೆತ್ತುಕೊಂಡಿದ್ದರಿಂದ ನೂರಾರು ಪ್ರಯಾಣಿಕರ ಜೀವ ಉಳಿದಿದೆ.

ಸಾಮಾನ್ಯವಾಗಿ ಎಲ್ಲ ವಿಮಾನಗಳಿಗು ಏರ್ ಟ್ರಾಫಿಕ್ ಕಂಟ್ರೋಲ್ ನವರು ಸೂಚನೆ ನೀಡುತ್ತಾರೆ. ಅದೇ ರೀತಿ ಗಾಳಿಯ ವೇಗ ಹೆಚ್ಚಿದ್ದಾಗಲೂ ಲ್ಯಾಂಡ್ ಆಗಲು ತಯಾರಾಗುತ್ತಿದ್ದ ಸಿಂಗಪೂರ್ ಏರ್ ಲೈನ್ಸ್ ಗೂ ಸೂಚನೆ ನೀಡಿದ್ದಾರೆ. ಬಲಗಡೆಗೆ ಟರ್ನ್ ಮಾಡಿಕೋ ಅಂತ ಪೈಲಟ್ ಗೆ ಸೂಚನೆ ನೀಡಿದ್ದಾರೆ. ಆದರೆ ಆ ಭೂಪನಿಗೆ ಅದೇನು ಕೇಳಿಸಿತೋ ಏನೋ ಎಡಕ್ಕೆ ತಿರುಗಿಸಿದ್ದಾನೆ.

ಅಸಲಿಗೆ ಸಿಂಗಪೂರ್ ವಿಮಾನ ಬಲಕ್ಕೆ ತಿರುಗಬೇಕಿತ್ತು. ಏರ್ ಟ್ರಾಫಿಕ್ ಕಂಟ್ರೋಲ್ ನವರು ಕೂಡ ಅದನ್ನೇ ಹೇಳಿದ್ದರು. ಆದರೆ ಪೈಲಟ್ ಎಡಕ್ಕೆ ತಿರುಗಿಸಿದ್ದ. ಆ ಮಾರ್ಗದಲ್ಲಿ ಮತ್ತೊಂದು ವಿಮಾನ ಬರುತ್ತಿತ್ತು. ಆದರೆ ಅದು ಕೊಂಚ ದೂರ ಇತ್ತು. ಹೀಗಾಗಿ ನೂರಾರು ಪ್ರಯಾಣಿಕರ ಜೀವ ಉಳಿಯಿತು. ಇಲ್ಲದಿದ್ದರೆ ಇವತ್ತು ಪ್ರಪಂಚದಾದ್ಯಂತ ಬರೀ ಇದೇ ಸುದ್ದಿಯಾಗಿಬಿಡುತ್ತಿತ್ತು.

Leave a Reply

Your email address will not be published. Required fields are marked *