ಹಾಯ್ ಬೆಂಗಳೂರ್

ಶೂಟಿಂಗ್ ಮುಂದುವರೆಸಲು ಹೈದರಾಬಾದ್ ನತ್ತ ತಲೈವಾ ಪಯಣ

ತಮಿಳುನಾಡಿನಲ್ಲಿ ಚುನಾವಣೆ ಮುಗಿದಿದೆ. ಸೂಪರ್ ಸ್ಟಾರ್ ರಜಿನಿಕಾಂತ್ ಆರೋಗ್ಯವೂ ಸುಧಾರಿಸಿದೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಅವರ ಚೈತನ್ಯವನ್ನು ಹೆಚ್ಚಿಸಿದೆ. ಹೀಗಾಗಿ ತಲೈವ ಇವತ್ತು ಖುಷಿ ಖುಷಿಯಾಗಿ ಹೈದರಾಬಾದ್ ಗೆ ಹೊರಟರು.

ಅರ್ಧಕ್ಕೆ ನಿಲ್ಲಿಸಿದ್ದ ‘ಅನ್ನಾತ್ತೆ’ ಶೂಟಿಂಗನ್ನು ಮುಗಿಸಿಕೊಡುವ ಸಲುವಾಗಿ ತಲೈವಾ ಇವತ್ತು ಹೈದರಾಬಾದ್ ನ ವಿಶೇಷ ವಿಮಾನ ಹತ್ತಿದ್ದಾರೆ. ಅವರು ಏರ್ ಪೋರ್ಟ್ ಗೆ ಬರುತ್ತಿರುವುದು ಮತ್ತು ವಿಮಾನವನ್ನು ಹತ್ತುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಅದೂ ಅಲ್ಲದೆ ಅಭಿಮಾನಿಗಳು ಸಿನೆಮಾ ಬಿಡುಗಡೆಗಾಗಿ ಕಾಯುತ್ತಾ ಕುಳಿತಿದ್ದಾರೆ.

ಹೈದರಾಬಾದ್ ನ ರಾಮೋಜಿರಾವ್ ಸ್ಟುಡಿಯೋದಲ್ಲಿ ನಡೆಯಲಿರುವ ಈ ಚಿತ್ರದ ಶೂಟಿಂಗ್ ನಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಭಾಗವಹಿಸಲಿದೆ. ಇದಾದ ಮೇಲೆ ಕಲ್ಕತ್ತಾದಲ್ಲೂ ಕೆಲ ಸೀನ್ ಗಳನ್ನು ಶೂಟ್ ಮಾಡಲು ನಿರ್ದೇಶಕ ಶಿವ ಆಲೋಚಿಸುತ್ತಿದ್ದಾರೆ ಅಂತ ಹೇಳಲಾಗ್ತಿದೆ.

ಒಟ್ಟಿನಲ್ಲಿ ಇದೇ ದೀಪಾವಳಿಗೆ ಚಿತ್ರ ತೆರೆ ಕಾಣಲಿದ್ದು ರಜಿನಿ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *