ಹಾಯ್ ಬೆಂಗಳೂರ್

ತಮಿಳು ಚಿತ್ರರಂಗದ ಹಾಸ್ಯ ನಟ ವಿವೇಕ್ ಇನ್ನಿಲ್ಲ

ತಮಿಳು ಚಿತ್ರರಂಗಕ್ಕಿಂದು ನಿಜಕ್ಕೂ ದುಃಖದ ದಿನ. ಯಾಕೆಂದರೆ ವರ್ಷಾನುಗಟ್ಟಲೆ ಕೋಟ್ಯಂತರ ಜನರನ್ನು ರಂಜಿಸಿದ ಹಾಸ್ಯ ನಟ ವಿವೇಕ್ ಇನ್ನಿಲ್ಲ. ಇನ್ನಿಲ್ಲ ಎಂಬ ಸುದ್ದಿಯನ್ನು ಕೇಳುವುದೇ ಅಸಲಿಗೆ ದುಸ್ತರ. ತೆರೆ ಮೇಲೆ ಆತನ ಮುಖವನ್ನು ನೋಡುತ್ತಿದ್ದಂತೆ ಜನರ ಬಾಯಿಂದ ನಗು ಉಕ್ಕಿ ಬರುತ್ತಿತ್ತು. ಆತನ ಡೈಲಾಗ್ ಡೆಲಿವರಿ ಸ್ಟೈಲು, ಮ್ಯಾನರಿಸಮ್ಮು ನೋಡುಗರನ್ನು ಬಿದ್ದು ಬಿದ್ದೂ ನಗುವಂತೆ ಮಾಡುತ್ತಿತ್ತು. ಅಷ್ಟು ವರ್ಷಗಳ ಕಾಲ ರಂಜಿಸಿದ ಜೀವ ಇನ್ನಿಲ್ಲ ಎಂಬ ಮಾತನ್ನ ಕೇಳೋದಕ್ಕೆ ಮನಸ್ಸು ತಯಾರಿಲ್ಲ.

ನಿನ್ನೆ ಹಾರ್ಟ್ ಅಟ್ಯಾಕ್ ಆದ ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದಕ್ಕೂ ಒಂದು ದಿನದ ಮುಂಚೆಯಷ್ಟೇ ಅವರೇ ಸರ್ಕಾರಿ ಆಸ್ಪತ್ರೆಯನ್ನು ಬಯಸಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದರು. ಆ ವೇಳೆ ಅವರು ಸರ್ಕಾರಿ ಆಸ್ಪತ್ರೆಯ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನಾಡಿದ್ದರು.

ಇಡೀ ದಕ್ಷಿಣ ಭಾರತೀಯ ಚಿತ್ರರಂಗ ವಿವೇಕ್ ಸಾವಿಗೆ ಕಂಬನಿ ಮಿಡಿದಿದೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಾಸ್ಯನಟನಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. “ಅವರ ಟೈಮಿಂಗ್ ಮತ್ತು ಇಂಟಲಿಜೆಂಟ್ ಡೈಲಾಗ್ ಡೆಲಿವರಿ ರೀತಿ ಜನರನ್ನು ರಂಜಿಸಿದೆ. ಅದೇ ರೀತಿ ಅವರು ಪ್ರಕೃತಿ ಬಗ್ಗೆ ತೋರಿಸುತ್ತಿದ್ದ ಕಾಳಜಿ ಶ್ಲಾಘನೀಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಅಂತ ತಮ್ಮ ಟ್ವೀಟ್ ನಲ್ಲಿ ಪ್ರಧಾನಿ ಮೋದಿ ವಿವೇಕ್ ಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

 

Leave a Reply

Your email address will not be published. Required fields are marked *