ಹಾಯ್ ಬೆಂಗಳೂರ್

ಚಿಂತಾಜನಕ ಸ್ಥಿತಿಯಲ್ಲಿ ತಮಿಳಿನ ಹಾಸ್ಯನಟ ವಿವೇಕ್

ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ವಿವೇಕ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ನಿನ್ನೆಯಷ್ಟೇ ಚೆನ್ನೈನ ಓಮನ್ ದುರರ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡು ಬಂದಿದ್ದ ವಿವೇಕ್ ಗೆ ಇಂದು ಮಧ್ಯಾಹ್ನ ಸಣ್ಣದಾಗಿ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ಪರೀಕ್ಷೆ ಮಾಡಿದ ವೈದ್ಯರು ಗಂಭೀರವಾಗಿ ಹಾರ್ಟ್ ಅಟ್ಯಾಕ್ ಆಗಿದೆ ಅಂತ ಹೇಳಿದ್ದಾರೆ.

ವಿಪರ್ಯಾಸ ನೋಡಿ ಹೇಗಿದೆ ಅಂದರೆ ನಿನ್ನೆಯಷ್ಟೇ ಸರ್ಕಾರಿ ಆಸ್ಪತ್ರೆಯಲ್ಲಿ ಸ್ನೇಹಿತರ ಜೊತೆಗೆ ಹೋಗಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದ ವಿವೇಕ್ ತಾನು ಯಾಕೆ ಸರ್ಕಾರಿ ಆಸ್ಪತ್ರೆಯನ್ನೇ ಆಯ್ಕೆ ಮಾಡಿಕೊಂಡೆ, ಖಾಸಗಿ ಆಸ್ಪತ್ರೆಯನ್ನು ತಿರಸ್ಕರಿಸಿದೆ ಎನ್ನುವುದಕ್ಕೆ ಕಾರಣ ಹೇಳಿದರು. ಆದರೆ ಇಂದು ಅದೇ ಖಾಸಗಿ ಆಸ್ಪತ್ರೆಯಲ್ಲಿ ಅವರು ಗಂಭೀರ ಸ್ಥಿತಿಯಲ್ಲಿ ಮಲಗಿದ್ದಾರೆ.

ಸರ್ಕಾರಿ ಆಸ್ಪತ್ರೆಯಾದರೆ ಎಲ್ಲರಿಗೂ ಲಭ್ಯವಿರುತ್ತದೆ. ಆದರೆ ಖಾಸಗಿ ಆಸ್ಪತ್ರೆ ಹಾಗಲ್ಲ. ಅದು ಶ್ರೀಮಂತರಿಗೆ ಮಾತ್ರ ಲಭ್ಯ ಎಂದು ಹೇಳಿದ ಅವರು ಕೋವಿಡ್ ಲಸಿಕೆ ಬಗ್ಗೆ ಯಾರೂ ಹೆದರಿಕೊಳ್ಳಬೇಡಿ ಅಂತ ಧೈರ್ಯ ತುಂಬಿದರು. ನಿನ್ನೆ ಹಾಗೆ ತಮಾಷೆಯಾಗಿ ಮಾತನಾಡಿದ ಅವರು ಇಂದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಅವರ ಆರೋಗ್ಯ ಬೇಗನೆ ಸುಧಾರಿಸಲಿ. ಎಂದಿನಂತೆ ಅವರು ಎಲ್ಲರನ್ನು ನಗಿಸುತ್ತಾ ಓಡಾಡಿಕೊಂಡಿರಲಿ ಅಂತ ತಮಿಳುನಾಡಿನ ಜನರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

Leave a Reply

Your email address will not be published. Required fields are marked *