ಹಾಯ್ ಬೆಂಗಳೂರ್

ಈ ವೀಕೆಂಡ್ ಗೆ ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಇರೋದಿಲ್ಲ: ಕಾರಣ ಏನು ಅಂತ ಗೊತ್ತಾ?

ನಟನೆಯ ಜೊತೆಗೆ ಕಳೆದ ಎಂಟು ಸೀಸನ್ ಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನೂ ನಿರೂಪಣೆ ಮಾಡಿಕೊಂಡು ಜನರನ್ನು ರಂಜಿಸುತ್ತಿರುವ ಕಿಚ್ಚ ಸುದೀಪ್ ಕೆಲ ದಿನಗಳ ಕಾಲ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದನ್ನು ಕೇಳಿ ಅವರ ಅಭಿಮಾನಿಗಳ ಮನಸ್ಸಿಗೆ ಆಘಾತ ಉಂಟಾಗಿರಬೇಕು. ಏನಾಯಿತಪ್ಪ ಸುದೀಪ್ ಗೆ ಅಂತ ಅನೇಕರು ಯೋಚಿಸುತ್ತಿರಬೇಕು.

ಅಂಥದ್ದೇನೂ ಆಗಿಲ್ಲ. ಹಗಲು ರಾತ್ರಿ ಸರಿಯಾಗಿ ರೆಸ್ಟ್ ತೆಗೆದುಕೊಳ್ಳದೆ ಕೆಲಸ ಮಾಡೋದು ಸುದೀಪ್ ಅವರ ಗುಣ. ಇದರಿಂದ ಸಹಜವಾಗಿಯೇ ಅವರ ಆರೋಗ್ಯ ಸ್ವಲ್ಪ ಕೈಕೊಟ್ಟಿದೆ. ಹೀಗಾಗಿ ವೈದ್ಯರು ರೆಸ್ಟ್ ಮಾಡೋಕೆ ಹೇಳಿದ್ದಾರೆ. ರೆಸ್ಟ್ ಮಾಡಲೇಬೇಕಾಗಿರುವುದು ಅನಿವಾರ್ಯವಾಗಿರೋದ್ರಿಂದ ಅವರು ಈ ವೀಕೆಂಡ್ ನಲ್ಲಿ ಬಿಗ್ ಬಾಸ್ ನಲ್ಲಿ ಲಭ್ಯವಿರೋದಿಲ್ಲ.

ಇದನ್ನು ಅವರೇ ಸ್ಪಷ್ಟ ಪಡಿಸಿದ್ದಾರೆ. ವೀಕೆಂಡ್ ಗೂ ಮೊದಲೇ ನಾನು ಅನಾರೋಗ್ಯದಿಂದ ಚೇತರಿಸಿಕೊಳ್ಳುವೆ ಅಂತ ಭಾವಿಸಿದ್ದೆ. ಆದರೆ ಹೆಚ್ಚಿನ ವಿಶ್ರಾಂತಿ ಅಗತ್ಯವೆಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಕಾರಣದಿಂದ ಈ ವಾರದ ಬಿಗ್ ಬಾಸ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂತ ಸ್ವತಃ ಸುದೀಪ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಹಾಗಾದ್ರೆ ಕಿಚ್ಚ ಸುದೀಪ್ ಅವರ ಬದಲು ಯಾರು ನಿರೂಪಕರಾಗುತ್ತಾರೆ ಅಥವಾ ಮನೆಯಿಂದಲೇ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನಿರೂಪಣೆ ಮಾಡುತ್ತಾರಾ? ಗೊತ್ತಿಲ್ಲ. ಸದ್ಯಕ್ಕಂತೂ ಎಲ್ಲವೂ ಸಸ್ಪೆನ್ಸ್. ಬಿಗ್ ಬಾಸ್ ಕ್ರಿಯೇಟಿವ್ ಟೀಂನ ಹುಡುಗರು ಯಾರನ್ನು ಕರೆ ತಂದು, ಯಾವ ರೀತಿಯಲ್ಲಿ ಅವರನ್ನು ನಿರೂಪಣೆಗೆ ರೆಡಿ ಮಾಡುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *