ಹಾಯ್ ಬೆಂಗಳೂರ್

ನಾಳೆ ಸರ್ವಪಕ್ಷಗಳ ಸಭೆ ಬಳಿಕ ಕಠಿಣ ನಿಯಮ ಜಾರಿ: ಯಡಿಯೂರಪ್ಪ

ಬೆಂಗಳೂರಿನಲ್ಲಿ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಾಳೆ ಸರ್ವ ಪಕ್ಷಗಳ ಸಭೆ ಕರೆದು ಅಲ್ಲಿ ಕೋವಿಡ್ ರೂಲ್ಸ್ ಬಗ್ಗೆ ಚರ್ಚೆ ಮಾಡಲಾಗುವುದು. ಬಳಿಕ ಕಠಿಣ ನೀತಿ ನಿಯಮಗಳನ್ನು ಜಾರಿ ಮಾಡಲಾಗುವುದು ಅಂತ ಯಡಿಯೂರಪ್ಪ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು ಈಗಾಗಲೇ ಬೆಂಗಳೂರಿನಲ್ಲಿ ಒಂದೂವರೆ ಸಾವಿರ ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಹತ್ತು ಹೊಸ ಕೋವಿಡ್ ಸೆಂಟರ್ ಗಳನ್ನು ತೆರೆಯಲಾಗುತ್ತದೆ, ಅತೀ ಶೀಘ್ರದಲ್ಲೇ ಬೇರೆ ಜಿಲ್ಲೆಗಳಲ್ಲೂ ಹಾಸಿಗೆ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಅಂತ ತಿಳಿಸಿದರು.

ಆದರೆ ಬೆಂಗಳೂರಿನಲ್ಲಿ ಇರುವ ಪರಿಸ್ಥಿತಿಯೇ ಬೇರೆ. ಇಲ್ಲಿನ ಆಸ್ಪತ್ರೆಗಳಲ್ಲಿ ಬೆಡ್ ಗಳೇ ಇಲ್ಲ. ಸತ್ತವರಿಗೆ ಬೆಂಕಿಯನ್ನೇ ಇಡಬೇಕು. ಸ್ಮಶಾನಗಳಲ್ಲೂ ಉದ್ದುದ್ದು ಸಾಲು ಇದೆ. ಬೇಗನೆ ಮುಗಿಸಿಕೊಂಡು ಬಂದರೆ ಸಾಕಪ್ಪ ಅಂತ ಅನ್ನಿಸಿಬಿಡುತ್ತದೆ.

ಒಟ್ಟಿನಲ್ಲಿ ಮತ್ತೆ ಬೆಂಗಳೂರಿಗೆ ಸೂತಕದ ಛಾಯೆ ಆವರಿಸಿದೆ. ಸದ್ಯ ಕೊರೋನಾ ಕಡಿಮೆ ಆಯಿತಲ್ಲಪ್ಪ ಅಂತ ಜನ ನಿಟ್ಟುಸಿರು ಬಿಡುತ್ತಿದ್ದಂತೆಯೇ ಅದಿನ್ನೂ ಜಾಸ್ತಿಯಾಗಿ ಆತಂಕದ ಏದುಸಿರು ಬಿಡುವಂತೆ ಮಾಡಿರೋದು ವಿಪರ್ಯಾಸವೆ ಸರಿ.

Leave a Reply

Your email address will not be published. Required fields are marked *