ಹಾಯ್ ಬೆಂಗಳೂರ್

ಕೆಲಸಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ: ಸಾರಿಗೆ ನೌಕರರಿಗೆ ಯಡ್ಡಿ ವಾರ್ನಿಂಗ್

ಮುಖ್ಯಮಂತ್ರಿ ಯಡಿಯೂರಪ್ಪನವರು ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಮೇಲೆ ಫುಲ್ ಗರಂ ಆಗಿಬಿಟ್ಟಿದ್ದಾರೆ. ಅವರೇನೋ ಪಾಪ ಆರನೇ ವೇತನ ಆಯೋಗದ ಶಿಫಾರಸ್ಸಿನ ಅನುಸಾರ ತಮಗೆ ಸಂಬಳ ಕೊಡಿ ಅಂತ ಬೇಡಿಕೆ ಇಟ್ಟಿದ್ದಾರೆ ನಿಜ. ಸರ್ಕಾರ ಆಗಲ್ಲ ಅಂತ ಹೇಳಿದ ಮೇಲೆಯೇ ಪ್ರತಿಭಟನೆ ಮಾಡುತ್ತಿದ್ದಾರೆ.

 

 

 

 

ಏನೋ ಒಂದಷ್ಟು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಬಿಟ್ಟು ಆ ಬಡಪಾಯಿಗಳ ಮೇಲೆ ಹರಿಹಾಯ್ದರೆ ಹೇಗೆ ಸ್ವಾಮಿ. ಅವರು ಸರ್ಕಾರವನ್ನಲ್ಲದೆ ಇನ್ಯಾರನ್ನು ಕೇಳಬೇಕು ಹೇಳಿ. ಅಷ್ಟಕ್ಕೂ ಯಾವುದೇ ಸರ್ಕಾರವಾಗಲಿ ಪ್ರತಿಭಟನೆ ಮಾಡದ ಹೊರತು ಬೇಡಿಕೆಗಳನ್ನು ಈಡೇರಿಸಿದ ಉದಾಹರಣೆಯಾದರೂ ಎಲ್ಲಿದೆ.

ಇನ್ನೂರ ಇಪ್ಪತ್ತನಾಲ್ಕು ಶಾಸಕರಿಗೆ, ಉಳಿದ ಅಧಿಕಾರಿಗಳಿಗೆ ಮಾತ್ರ ಅವರು ಕೆಲಸಕ್ಕೆ ಬರಲಿ ಬಿಡಲಿ ಟೈಂ ಟು ಟೈಂ ಬೋನಸ್ಸು, ಇಂಕ್ರಿಮೆಂಟು ಎಲ್ಲ ಕೊಡ್ತೀರ. ನಮಗ್ಯಾಕೆ ಕೊಡಲ್ಲ, ನಾವೇನು ಪಾಪ ಮಾಡಿದ್ವಿ ಅಂತ ಸಾರಿಗೆ ನೌಕರರು ಕೇಳಿದರೆ ಯಡಿಯೂರಪ್ಪ ಗುರ್ ಅಂತಾರೆ.

ಈ ಕ್ಷಣ ನೀವು ಕರ್ತವ್ಯಕ್ಕೆ ಹಾಜರಾಗಲಿಲ್ಲ ಅಂದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ ಅಂತ ಸಾರಿಗೆ ನೌಕರರಿಗೆ ಯಡ್ಡಿ ಎಚ್ಚರಿಕೆ ನೀಡಿದ್ದಾರೆ. ಈ ಸರ್ಕಾರಕ್ಕೆ ಕಠಿಣ ಕ್ರಮ ಎಂಬ ಪದ ಬಳಕೆ ಕಾಮನ್ ಆಗಿಬಿಟ್ಟಿದೆ. ಎಲ್ಲರಿಗೂ ಅದೇ ವಾರ್ನಿಂಗ್ ನೀಡುತ್ತದೆ. ನೀವು ಮಾಡೋ ಕೆಲಸ ನೆಟ್ಟಗೆ ಮಾಡಿದ್ರೆ ಅವರ್ಯಾಕೆ ಪ್ರತಿಭಟನೆ ಮಾಡುತ್ತಾರೆ ಹೇಳಿ. ಇದಕ್ಕೆ ಮಾತ್ರ ಘನ ಸರ್ಕಾರ ಉತ್ತರ ನೀಡಲ್ಲ.

Leave a Reply

Your email address will not be published. Required fields are marked *