ಹಾಯ್ ಬೆಂಗಳೂರ್

ಲಾಕ್ ಡೌನ್ ಕುರಿತು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ

“ರಾಜ್ಯದಲ್ಲಿ ಲಾಕ್ ಡೌನ್ ಮಾಡಬೇಕಾ ಬೇಡವಾ ಅನ್ನೋದನ್ನ ಸರ್ಕಾರ ಇನ್ನೂ ತೀರ್ಮಾನ ಮಾಡಿಲ್ಲ. ಈ ಬಗ್ಗೆ ಯಾರ್ಯಾರೋ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ದಯವಿಟ್ಟು ಜನರು ಇದನ್ನು ನಂಬಬಾರದು. ಯಾರಾದರೂ ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ಮಾಡಿದರೆ ಸರ್ಕಾರ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ” ಅಂತ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ಖಾಸಗಿ ವಾಹಿನಿಗಳು ಬ್ರೇಕಿಂಗ್ ನ್ಯೂಸ್ ಅಂತ ತೋರಿಸುತ್ತಿವೆ. ತಮಾಷೆ ಅಂದರೆ ಕೆಲ ಮಾಧ್ಯಮಗಳೇ ಈ ಕುರಿತು ಜನರನ್ನು ಆತಂಕಕ್ಕೀಡು ಮಾಡುವಂತೆ ಸುದ್ದಿ ಪ್ರಸಾರ ಮಾಡುತ್ತಿವೆ. ಬಹುಶಃ ಅಂಥ ಕೆಲ ಮಾಧ್ಯಮಗಳನ್ನೇ ಉದ್ದೇಶಿಸಿ ಸಿಎಂ ಆ ಮಾತು ಹೇಳಿರಬೇಕು.

ಹೌದು, ರಾಜ್ಯದಲ್ಲಿರುವ ಕೆಲ ಮಾಧ್ಯಮಗಳು ಸುದ್ದಿಯಲ್ಲಿ ನೈಜತೆ ಇದೆಯೋ ಇಲ್ಲವೋ ಪರಾಮರ್ಶೆ ಮಾಡದೆ ಸುಮ್ಮನೆ ತೋರಿಸಿ ಜನರಲ್ಲಿ ಭೀತಿ ಮೂಡಿಸುವ ಕೆಲಸ ಮಾಡುತ್ತಿವೆ. ಕಳೆದ ಬಾರಿಯೂ ಇದೇ ರೀತಿ ಆಯಿತು. ನಮ್ಮಲ್ಲೇ ಮೊದಲು, ನಾವೇ ಫಸ್ಟು, ಎಕ್ಸ್ ಕ್ಲೂಸಿವ್ ಅಂತೆಲ್ಲಾ ಹೇಳಿಕೊಂಡು ಕಿಲ್ಲರ್ ಕೊರೋನಾ ಅಂತೆಲ್ಲಾ ಭಯ ಹುಟ್ಟಿಸೋ ರೀತಿಯಲ್ಲಿ ತೋರಿಸುತ್ತಾ  ಜನರ ಎದೆ ಡವ ಡವ ಅಂತ ಬಡಿದುಕೊಳ್ಳುವಂತೆ ಮಾಡಿದ್ದವು.

ಆದರೆ ಈ ಬಾರಿ ಹಾಗಾಗಬಾರದು. ಯಾಕೆಂದರೆ ಲಸಿಕೆ ಬಂದಾಗಿದೆ. ಅದನ್ನು ಎಲ್ಲರೂ ತೆಗೆದುಕೊಂಡರೆ ಮುಗೀತು. ಪ್ರತಿಯೊಂದು ಫಿಸಿಷಿಯನ್ ಕ್ಲಿನಿಕ್ ನಲ್ಲೂ ಲಸಿಕೆ ಸಿಗುವಂತಾಗಬೇಕು. ಆಗ ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದೇನೋ.

ಇನ್ನು ಲಾಕ್ ಡೌನ್ ವಿಚಾರಕ್ಕೆ ಬರೋದಾದರೆ ಜನರಿಗೆ ಅದನ್ನು ಸಹಿಸೋ ಶಕ್ತಿಯನ್ನು ಬಿಲ್ಕುಲ್ ಹೊಂದಿಲ್ಲ. ಒಟ್ಟಿನಲ್ಲಿ ಈ ವರ್ಷವೂ ಜನರು ನೆಮ್ಮದಿಯಿಂದ ಬದುಕುವ ವಾತಾವರಣವಂತೂ ಖಂಡಿತಾ ಇಲ್ಲ.

Leave a Reply

Your email address will not be published. Required fields are marked *