ಹಾಯ್ ಬೆಂಗಳೂರ್

ಎಸ್.ಐ.ಟಿ. ಮುಂದೆ ಏನು ಹೇಳಿದ್ದಾಳೆ ಗೊತ್ತಾ ಸಿ.ಡಿ. ಲೇಡಿ?

ರಮೇಶ್ ಜಾರಕಿಹೊಳಿ ಜೊತೆ ಪಲ್ಲಂಗ ಕ್ರೀಡೆ ನಡೆಸಿದ ಯುವತಿ ಇಂದು ವಿಶೇಷ ತನಿಖಾಧಿಕಾರಿಗಳ ತಂಡದ ಮುಂದೆ ತನ್ನ ಎಲ್ಲ ವಿಷಯವನ್ನೂ ಬಾಯಿಬಿಟ್ಟಿದ್ದಾಳೆ ಎಂದು ಹೇಳಲಾಗಿದೆ. ಬೆಂಗಳೂರಿನ ಆಡುಗೋಡಿಯಲ್ಲಿರುವ ತಾಂತ್ರಿಕ ಸೆಲ್ ನಲ್ಲಿ ಅಧಿಕಾರಿಗಳು ಇಂದು ಆಕೆಯನ್ನು ಸುಮಾರು ನಾಲ್ಕೂವರೆ ತಾಸು ವಿಚಾರಣೆ ನಡೆಸಿದರು. ಅದೇನಿತ್ತೋಪ್ಪ ನಾಲ್ಕೂವರೆ ತಾಸು ಪ್ರಶ್ನೆ ಕೇಳಲು ಅಂತ ಜನರು ಮುಸಿ ಮುಸಿ ನಗುತ್ತಿದ್ದಾರೆ.

ಅಂದಹಾಗೆ ಯುವತಿಯು ತನ್ನ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಷಯಗಳನ್ನು ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಜೊತೆಗೆ ತನ್ನ ಲವ್ ಸ್ಟೋರಿಯನ್ನೂ ಬಿಚ್ಚಿಟ್ಟಿದ್ದಾಳೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಂದಹಾಗೆ ಆಕೆ ಆಕಾಶ್ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ರಮೇಶ್ ಜಾರಕಿಹೊಳಿ ಜೊತೆಗಿದ್ದ ಸೀಡಿ ಬಹಿರಂಗವಾದ ಮೇಲೂ ಆತ ಈಕೆಯನ್ನು ಬಿಟ್ಟು ಹೋಗಲಿಲ್ಲವಂತೆ. ಜೊತೆಗೇ ಇದ್ದು ಬೆಂಬಲ ನೀಡಿದನಂತೆ (ಆತ ಎಷ್ಟು ಗ್ರೇಟ್ ನೋಡಿ). ಧೈರ್ಯ ಬೇರೆ ತುಂಬಿದನಂತೆ. ಯಾವಾಗ ಆತನಿಗೆ ಆತನ ಮನೆಯವರು ಕ್ಯಾಕರಿಸಿ ಉಗಿದರೋ ಆಗ ಇವಳನ್ನು ಬಿಟ್ಟು ಹೋದನಂತೆ. ಸದ್ಯ ಆತನಿಗೂ ಈಕೆಗೂ ಯಾವುದೇ ಸಂಬಂಧವಿಲ್ಲವಂತೆ (ಪುಣ್ಯ ಆತ ಬಚಾವಾದ).

ಇಷ್ಟು ದಿನಗಳ ಕಾಲ ಎಲ್ಲಿದ್ದೆಯಮ್ಮ ಅಂತ ಪೊಲೀಸರು ಪ್ರಶ್ನಿಸಿದಾಗ, ನನಗೆ ಜಾರಕಿಹೊಳಿಯಿಂದ ಜೀವಭಯ ಇತ್ತು. ಹಾಗಾಗಿ ನಾನು  ಬೆಂಗಳೂರಿನಿಂದ ಹೊರಗಡೆ ಹೋಗಿ ಯಾರಿಗೂ ಗೊತ್ತಾಗದ ಸ್ಥಳದಲ್ಲಿ ಉಳಿದುಕೊಂಡಿದ್ದೆ ಅಂತ ಹೇಳಿದ್ದಾಳೆ.

Leave a Reply

Your email address will not be published. Required fields are marked *