ಹಾಯ್ ಬೆಂಗಳೂರ್

ಎರಡನೇ ಸುತ್ತಿನ ಲಸಿಕೆ ಹಾಕಿಸಿಕೊಂಡ ಪ್ರೈಮ್ ಮಿನಿಸ್ಟರ್: ದೇಶದಲ್ಲಿ ಹೆಚ್ಚುತ್ತಲೇ ಇದೆ ಪೀಡೆ ಕೋವಿಡ್

ಪ್ರೈಮ್ ಮಿನಿಸ್ಟರ್ ನರೇಂದ್ರ ಮೋದಿಗೆ ತಮ್ಮ ಆರೋಗ್ಯದ ಮೇಲೆ ಬಹಳ ಎಚ್ಚರಿಕೆ ಇದೆ. ಅವತ್ತು ಖುದ್ದು ತಾವೇ ದೆಹಲಿಯ ಏಮ್ಸ್ ಆಸ್ಪತ್ರೆಗೆ ಹೋಗಿ ಮೊದಲ ಸುತ್ತಿನ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡು ಮಂದಹಾಸ ಬೀರಿದ್ದರು. ಇವತ್ತು ಎರಡನೇ ಶಾಟ್ ಲಸಿಕೆಯನ್ನು ಹಾಕಿಸಿಕೊಂಡು ಮತ್ತೆ ನಗೆ ಬೀರಿದ್ದಾರೆ.

ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಮಾರ್ಚ್ 1ನೇ ತಾರೀಖಿನಂದು ಚುಚ್ಚಿಸಿಕೊಂಡಿದ್ದ ಮೋದಿ ಭಾಯ್ ಇವತ್ತು ಅದರ ಮುಂದುವರಿದ ಭಾಗವಾಗಿರೋ ಎರಡನೇ ಸುತ್ತಿನ ಲಸಿಕೆಯನ್ನು ಚುಚ್ಚಿಸಿಕೊಂಡಿದ್ದಾರೆ. ಅದರ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಜನರನ್ನು ಪ್ರೋತ್ಸಾಹಿಸಿದ್ದಾರೆ. ಆದಷ್ಟು ಬೇಗ ನೀವೂ ಕೂಡ ಲಸಿಕೆಯನ್ನು ಹಾಕಿಸಿಕೊಂಡು ವೈರಸ್ ನ ಓಡಿಸಿ ಅಂತ ದೇಶದ ಜನರಿಗೆ ಬುದ್ಧಿಮಾತನ್ನು ಹೇಳಿದ್ದಾರೆ.

ಪುದುಚೇರಿಯ ಪಿ.ನಿವೇದ ಮತ್ತು ಪಂಜಾಬ್ ನ ನಿಶಾ ಶರ್ಮಾ ಎಂಬಿಬ್ಬರು ನರ್ಸ್ ಗಳು ಮೋದಿಗೆ ಲಸಿಕೆಯನ್ನು ಹಾಕಿದ ನರ್ಸ್ ಗಳು ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಮೊದಲ ಬಾರಿಗೆ ಲಸಿಕೆ ಹಾಕಿಸಿಕೊಂಡಾಗಲೂ ಪಿ.ನಿವೇದ ಅವರು ನರ್ಸ್ ಗಳ ತಂಡದಲ್ಲಿ ಇದ್ದರು. ಪ್ರಧಾನಿಗೆ ಲಸಿಕೆ ಹಾಕಿದ್ದು ನನಗೆ ತುಂಬಾನೇ ಖುಷಿ ತಂದಿದೆ. ನನ್ನ ಜೀವನದಲ್ಲಿ ನಾನು ಪ್ರಧಾನಿಯನ್ನು ಹತ್ತಿರದಿಂದ ನೋಡುತ್ತೀನಿ ಅಂತ ಅಂದುಕೊಂಡಿರಲಿಲ್ಲ. ಅಂಥದ್ದರಲ್ಲಿ ಅವರಿಗೆ ಲಸಿಕೆ ಹಾಕಬೇಕು ಅಂತ ನನಗೆ ವೈದ್ಯಾಧಿಕಾರಿಗಳು ಹೇಳಿದಾಗ ರೋಮಾಂಚಿತಳಾಗಿಬಿಟ್ಟೆ. ಬಹಳ ಸಂತೋಷವಾಗುತ್ತಿದೆ ಅಂತ ಸಿಸ್ಟರ್ ಪಿ. ನಿವೇದ ಹೇಳಿಕೊಂಡಿದ್ದಾರೆ.

ಸಿಸ್ಟರ್ ಪಿ.ನಿವೇದ

ಇಡೀ ಪ್ರಪಂಚದಲ್ಲೇ ನಮ್ಮ ದೇಶ ವ್ಯಾಕ್ಸಿನ್ ಹಾಕುವುದರಲ್ಲಿ ಮೊದಲು ಸ್ಥಾನ ಪಡೆದಿದೆ. ಸರಾಸರಿ 30,93,861 ಜನರಿಗೆ ಪ್ರತಿನಿತ್ಯ ಲಸಿಕೆ ಹಾಕಲಾಗುತ್ತಿದೆ.

ಲಸಿಕೆ ಇದೆ ಎಂಬ ಸಮಾಧಾನದ ಬೆನ್ನಿಗೆ ಕೊರೋನಾದ ಎರಡನೇ ಅಲೆ ಎದ್ದಿರುವುದು ವೈದ್ಯರಲ್ಲಿ ಆತಂಕ ಮೂಡಿಸಿದೆ. ಹಾಗೆ ನೋಡಿದರೆ ನಮ್ಮ ದೇಶದ ಬಡಜನರು ಈ ದರಿದ್ರ ಖಾಯಿಲೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ. ಅವರಿಗೆ ಹೊಟ್ಟೆ ಪಾಡಿನ ಯೋಚನೆ.

Leave a Reply

Your email address will not be published. Required fields are marked *