ಹಾಯ್ ಬೆಂಗಳೂರ್

ಸರ್ಕಾರದ ನಿರ್ಧಾರಕ್ಕೆ ಚಿತ್ರರಂಗ ತೀವ್ರ ವಿರೋಧ: ಅಖಾಡಕ್ಕೆ ಶಿವಣ್ಣ ಎಂಟ್ರಿ

ಥಿಯೇಟರ್ ಗಳಲ್ಲಿರುವ ಸೀಟುಗಳ ಪೈಕಿ ಶೇ. 50ರಷ್ಟು ಮಾತ್ರ ಭರ್ತಿಗೆ ಅವಕಾಶ ಅಂತ ಇವತ್ತು ಇದ್ದಕ್ಕಿದ್ದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಿಗೆ ಇಡೀ ಚಿತ್ರರಂಗವೇ ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದೆ. ಪುನೀತ್ ಅವರ ‘ಯುವರತ್ನ’ ಚಿತ್ರಕ್ಕೆ ಇದು ಅಕ್ಷರಶಃ ಹೊಡೆತ ನೀಡಿರೋದು ನಿಜವೇ. ಹಾಗಾಗಿಯೇ ಇಡೀ ಚಿತ್ರತಂಡ ಮತ್ತು ಪುನೀತ್ ಅಭಿಮಾನಿಗಳು ಮೊದಲು ಫಿಲಂ ಛೇಂಬರ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.

ಇದೀಗ ಹ್ಯಾಟ್ರಿಕ್ ಹೀರೋ ಶಿವಣ್ಣ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರಮಂದಿರಗಳಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಹಾಗಾಗಿ ನೂರಕ್ಕೆ ನೂರರಷ್ಟು ಪ್ರೇಕ್ಷಕರ ಎಂಟ್ರಿಗೆ ಅವಕಾಶ ನೀಡಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಇಂದು ಸಂಜೆ ಖುದ್ದು ಅವರೇ ಚಿತ್ರರಂಗದ ಸಮೇತ ಹೋಗಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಅವರಿಗೆ ತಮ್ಮ (ಚಿತ್ರರಂಗದ) ಕಷ್ಟವನ್ನು ವಿವರಿಸಲಿದ್ದಾರೆ. ಇನ್ನು ಸರ್ಕಾರದ ನಿರ್ಧಾರ ವಿರೋಧಿಸಿ ನಟ ಯಶ್ ಕೂಡ ಟ್ವೀಟ್ ಮಾಡಿದ್ದಾರೆ. ಚಿತ್ರರಂಗದ ಮೇಲೆ ಹಠಾತ್ ದಾಳಿ ಖಂಡನೀಯ, ಎಲ್ಲರಿಗೂ ದುಡಿಯುವ ಅವಕಾಶ ಇದೆ. ಚಿತ್ರರಂಗಕ್ಕೆ ಮಾತ್ರ ಯಾಕಿಲ್ಲ ಅಂತ ಯಶ್ ಪ್ರಶ್ನೆ ಮಾಡಿದ್ದಾರೆ.

https://www.youtube.com/watch?v=FQMx47Tyq4s&t=59s

ಆದರೆ ಸಚಿವ ಸುಧಾಕರ್ ಇದಕ್ಕೆ ಜಗ್ಗುವಂತೆ ಕಾಣಿಸುತ್ತಿಲ್ಲ. ಶಾಲೆಗಳನ್ನು ಮುಚ್ಚುತ್ತಿದ್ದಾರೆ, ಪರಿಸ್ಥಿತಿ ಕೈ ಮೀರುತ್ತಿದೆ. ಇಂಥ ಸಂದರ್ಭದಲ್ಲೂ ನೂರಕ್ಕೆ ನೂರರಷ್ಟು ಸೀಟ್ ಭರ್ತಿ ಮಾಡಿ ಅಂತಿದೀರಲ್ಲ. ಇದು ನನ್ನೊಬ್ಬನ ನಿರ್ಧಾರ ಅಲ್ಲ. ತಾಂತ್ರಿಕ ಸಲಹಾ ಸಮಿತಿ ನೀಡಿರುವ ವರದಿಯನ್ನು ಆಧರಿಸಿ ಕ್ಯಾಬಿನೆಟ್ ತೆಗೆದುಕೊಂಡಿರುವ ನಿರ್ಧಾರ ಅಂತ ಸಚಿವ ಸುಧಾಕರ್ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಚಿತ್ರರಂಗ ಮತ್ತು ಸರ್ಕಾರದ ನಡುವೆ ಎದ್ದಿರುವ ಈ ಸಮರ ಯಾವ ಸ್ವರೂಪ ಪಡೆದು ಎಲ್ಲಿಗೆ ಹೋಗಿ ಅಂತ್ಯ ಕಾಣುತ್ತದೋ ಕಾದು ನೋಡಬೇಕು.

Leave a Reply

Your email address will not be published. Required fields are marked *