ಹಾಯ್ ಬೆಂಗಳೂರ್

‘ಸಲಗ’ ರಿಲೀಸ್ ಮಾಡಲು ದುನಿಯಾ ವಿಜಿ ಮಾಡಿರೋ ಐಡಿಯಾ ಏನು ಗೊತ್ತಾ?

ದುನಿಯಾ ವಿಜಿ ನಟಿಸಿ ಮತ್ತು ನಿರ್ದೇಶಿಸಿರುವ ‘ಸಲಗ’ ಚಿತ್ರವು ಇದೇ 10 ರಂದು ಹೊಸಪೇಟೆಯಲ್ಲಿ ಭಾರಿ ಪ್ರಚಾರ ಪಡೆದುಕೊಳ್ಳಲಿದೆ. ಚಿತ್ರದ ನಿರ್ಮಾಪಕರು ಪ್ರಮೋಷನ್ ಸಲುವಾಗಿ ಕ್ರಿಕೆಟ್ ಟೂರ್ನಮೆಂಟನ್ನು ಆಯೋಜಿಸುತ್ತಿದ್ದಾರೆ.

ಚಿತ್ರದ ಪಬ್ಲಿಸಿಟಿ ಕ್ಯಾಂಪೇನ್ ಅಂಗವಾಗಿ ಕೋಲಾರ, ಶಿವಮೊಗ್ಗ ಮತ್ತು ಚಿತ್ರದುರ್ಗದಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಸಿದ್ಧಿ ಜನಾಂಗದ ಹುಡುಗರನ್ನು ಇಟ್ಟುಕೊಂಡು ಮಾಡಿರುವ ಹಾಡನ್ನು ಬೆಂಗಳೂರಿನಲ್ಲಿ ಏಪ್ರಿಲ್ 6ರಂದು ರಿಲೀಸ್ ಮಾಡಲಾಗುತ್ತಿದೆ.

ಆ ಹಾಡನ್ನು ಚರಣ್ ರಾಜ್ ಕಂಪೋಸ್ ಮಾಡಿದ್ದು ಹಿನ್ನೆಲೆ ಸಂಗೀತವನ್ನು ನವೀನ್ ಸಜ್ಜು ಮಾಡಿಕೊಟ್ಟಿದ್ದಾರೆ. ಈಗಾಗಲೇ ‘ಮಳೆಯೇ ಮಳೆಯೇ’ ಮತ್ತು ‘ಸೂರಿ ಅಣ್ಣ’ ಎಂಬ ಎರಡು ಹಾಡುಗಳು ಹೆಸರು ಮಾಡಿದ್ದು ಜನರ ಬಾಯಲ್ಲಿ ನಲಿದಾಡುತ್ತಿದೆ.

ಲಾಕ್ ಡೌನ್ ಆದ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಪ್ರಿ ರಿಲೀಸ್ ಇವೆಂಟ್ ಅನ್ನೋ ಹೊಸ ಟ್ರೆಂಡ್ ಶುರುವಾಗಿದೆ. ‘ಪೊಗರು’ ಚಿತ್ರದ ಪ್ರಿರಿಲೀಸ್ ಇವೆಂಟ್ ದಾವಣಗೆರೆಯಲ್ಲಿ ನಡೆದರೆ ‘ರಾಬರ್ಟ್’ ಚಿತ್ರದ್ದು ಹುಬ್ಬಳ್ಳಿಯಲ್ಲಿ ನಡೀತು. ‘ಯುವರತ್ನ’ದ್ದು ಕರ್ನಾಟಕದ ಪ್ರಮುಖ ನಗರಗಳಲ್ಲೆಲ್ಲಾ ಜರುಗಿತು.

ಒಟ್ಟಿನಲ್ಲಿ ಈಗಿನ ಟ್ರೆಂಡೇ ಒಂಥರಾ ವಿಭಿನ್ನ.

Leave a Reply

Your email address will not be published. Required fields are marked *