ಹಾಯ್ ಬೆಂಗಳೂರ್

ಚಿತ್ರರಂಗಕ್ಕೆ ಚೈತನ್ಯ ತುಂಬಿದ ‘ರಾಬರ್ಟ್’

‘ರಾಬರ್ಟ್’ ಚಿತ್ರ ಬಿಡುಗಡೆಯಾಗಿ 25 ದಿನಗಳನ್ನು ಪೂರೈಸಿ ಯಶಸ್ವಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ದರ್ಶನ್ ಡಬಲ್ ರೋಲ್ ನಲ್ಲಿ ಮಾಡಿರುವ ನಟನೆಯನ್ನು ನೋಡಲು ಅಭಿಮಾನಿಗಳು ದಿನದಿಂದ ದಿನಕ್ಕೆ ಥಿಯೇಟರ್  ಕಡೆಗೆ ಹರಿದು ಬರುತ್ತಿದ್ದಾರೆ.

ಕಲೆಕ್ಷನ್ ವಿಚಾರದಲ್ಲೂ ಅಷ್ಟೇ ಲಾಕ್ ಡೌನ್ ಆದ ಮೇಲೆ ಚಿತ್ರರಂಗಕ್ಕೆ ‘ರಾಬರ್ಟ್’ ಒಂದು ರೀತಿಯ ಚೈತನ್ಯ ತುಂಬಿದೆ ಅಂತಲೇ ಹೇಳಬಹುದು. ಒಂದು ಮೂಲದ ಪ್ರಕಾರ ಈಗಾಗಲೇ ಇದರ ಕಲೆಕ್ಷನ್ ಐವತ್ತು ಕೋಟಿ ರೂಪಾಯಿ ದಾಟಿದೆಯಂತೆ.

ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇದೇ ವರ್ಷ ಮತ್ತೊಂದು ಹಬ್ಬ ಕಾದಿದೆ. ರಾಕ್ ಲೈನ್ ಪ್ರೊಡಕ್ಷನ್ಸ್ ನಲ್ಲಿ ‘ಗೋಲ್ಡನ್ ರಿಂಗ್’ ಎಂಬ ಚಿತ್ರ ಶುರುವಾಗುತ್ತಿದೆ. ದರ್ಶನ್ ಇದರಲ್ಲಿ ನೇವಿ ಆಫೀಸರ್ (ನೌಕಾಪಡೆಯ ಅಧಿಕಾರಿ) ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಾದ ಮೇಲೆ ‘ವೀರ ಮದಕರಿ ನಾಯಕ’ ಶುರುವಾಗಲಿದೆ.

ಒಟ್ಟಿನಲ್ಲಿ ಸೊರಗಿ ಮಲಗಿದ್ದ ಚಿತ್ರರಂಗಕ್ಕೆ ‘ರಾಬರ್ಟ್’ ನಿಜಕ್ಕೂ ಚೈತನ್ಯ ತುಂಬಿದೆ ಅಂತಲೇ ಹೇಳಬಹುದು.

Leave a Reply

Your email address will not be published. Required fields are marked *