ಹಾಯ್ ಬೆಂಗಳೂರ್

ಕಾಶ್ಮೀರದ ಪ್ರಕೃತಿ ಸೌಂದರ್ಯದಲ್ಲಿ ರೈಡರ್ ನ ಜಾಲಿ ರೈಡಿಂಗ್

ಲಾಕ್ ಡೌನ್ ಆದ ನಂತರ ಇದೇ ಮೊದಲ ಬಾರಿಗೆ ನಿಖಿಲ್ ಗೌಡ ಹೊರ ರಾಜ್ಯಕ್ಕೆ ತೆರಳಿದ್ದಾರೆ. ತಮ್ಮ ಹೊಸ ಚಿತ್ರ ‘ರೈಡರ್’ನ ಶೂಟಿಂಗ್ ಗಾಗಿ ಜಮ್ಮು ಕಾಶ್ಮೀರದ ಸುಂದರ ಪ್ರದೇಶ ಲೇಹ್ ನಲ್ಲಿ ತಂಗಿದ್ದಾರೆ. ಅಲ್ಲಿ ಚಿತ್ರದ ಪ್ರಮುಖ ಭಾಗಗಳ ಶೂಟಿಂಗ್ ನ ಜೊತೆಗೆ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಕಾಶ್ಮೀರದ ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯವನ್ನು ತಾವು ಅನುಭವಿಸಿದರಷ್ಟೇ ಸಾಲದು ತಮ್ಮ ಅಭಿಮಾನಿಗಳು ಕೂಡ ಅನುಭವಿಸಬೇಕು ಅಂತ ಆ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ಕಾಲೇಜ್ ವಿದ್ಯಾರ್ಥಿ ಪಾತ್ರದಲ್ಲಿ ನಟಿಸುತ್ತಿರುವ ನಿಖಿಲ್ ಗೌಡ ಬಾಸ್ಕೆಟ್ ಬಾಲ್ ಆಟಗಾರನಾಗಿ ಮಿಂಚಲಿದ್ದಾರೆ.

ವಿಶೇಷ ಅಂದರೆ ಮುಂದಿನ ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಅವರ ಜೊತೆಗೆ ನಿಖಿಲ್ ನಟಿಸಲಿದ್ದಾರೆ. ಅನುಷಾ ರೈ ನಿಖಿಲ್ ತಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *