ಹಾಯ್ ಬೆಂಗಳೂರ್

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿದೆಯಂತೆ ಭಾರಿ ಡೀಲ್

ಮೋದಿ ಸರ್ಕಾರಕ್ಕೆ ಸಂಕಷ್ಟ ಶುರುವಾಯಿತು ಅಂತಿಟ್ಟುಕೊಳ್ಳಿ. ಭಾರತೀಯ ವಾಯುಪಡೆಗೆ ಇತ್ತೀಚೆಗೆ ರಫೇಲ್ ಯುದ್ಧ ವಿಮಾನಗಳನ್ನು ಖರೀದಿ ಮಾಡಿದರಲ್ಲ… ಅದರ ಖರೀದಿ ಒಪ್ಪಂದ ಆಗಲು ಭಾರತದಲ್ಲಿರುವ ಮಧ್ಯವರ್ತಿಯೊಬ್ಬನಿಗೆ ಡಸಾಲ್ಟ್ ಕಂಪನಿಯು ಒಂದು ಕೋಟಿ ಯೂರೋಗಳನ್ನು ಗಿಫ್ಟ್ ರೂಪದಲ್ಲಿ ನೀಡಿದೆ ಅಂತ ಫ್ರೆಂಚ್ ಪಬ್ಲಿಕೇಷನ್ ಮೀಡಿಯಾಪಾರ್ಟ್ ವರದಿ ಮಾಡಿದೆ.

ಫ್ರೆಂಚ್ ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆಡಿಟ್ ನಡೆಸುವಾಗ ಮೊದಲು ಈ ಅವ್ಯವಹಾರವನ್ನು ಕಂಡು ಹಿಡಿದಿದ್ದಾರೆ. ಇದನ್ನೇ ಇಟ್ಟುಕೊಂಡು ಎರಡೂ ದೇಶಗಳ ಕಾನೂನಿನಲ್ಲಿರುವ ಅಂಶವನ್ನು ಈ ತನಿಖಾಧಿಕಾರಿಗಳು ಪ್ರಶ್ನೆ ಮಾಡಲಿದ್ದಾರಂತೆ. ಅಸಲಿಗೆ ಫ್ರೆಂಚ್ ನ ಈ ಆಡಿಟ್ ಸಂಸ್ಥೆಗೆ ಅಲ್ಲಿನ ಆರ್ಥಿಕ ಅಪರಾಧ ವಿಭಾಗದಿಂದ ಮೊದಲೇ ಸುಳಿವು ಸಿಕ್ಕಿತ್ತಂತೆ.

ಅಂದಹಾಗೆ ಆ ಮಧ್ಯವರ್ತಿಯ ಹೆಸರು ಸುಶೇನ್ ಗುಪ್ತಾ ಅಂತ. ಈತ ಮೊದಲು ಒಮ್ಮೆ ಅಗಸ್ತಾವೆಸ್ಟ್ ಲ್ಯಾಂಡ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ. ಈ ಬಗ್ಗೆ ಡಸಾಲ್ಟ್ ಕಂಪನಿ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. ಮೀಡಿಯಾ ಪಾರ್ಟ್ ನ ವರದಿಗಾರನ ಪ್ರಕಾರ ಈಗ ಹೊರಬಂದಿರುವ ಸುದ್ದಿ ಏನೂ ಇಲ್ಲವಂತೆ. ಇನ್ನೂ ಮೂರು ಭಾಗಗಳಲ್ಲಿ ಸುದ್ದಿ ಹೊರಬರುತ್ತದಂತೆ. ಇದು ಮೊದಲನೇ ಭಾಗವಂತೆ. ಮೂರನೇ ಭಾಗದಲ್ಲಿ ಹೊರಬರುವ ಸುದ್ದಿ ಸಂಚಲನ ಹುಟ್ಟು ಹಾಕುತ್ತದಂತೆ.

ಅದೇನು ಬರುತ್ತದೋ ಕಾದು ನೋಡೋಣ. ಒಟ್ಟಿನಲ್ಲಿ ವಿಪಕ್ಷ ಕಾಂಗ್ರೆಸ್ ಗೆ ಮೋದಿ ವಿರುದ್ಧ ಹರಿಹಾಯಲು ಇದೊಂದು ಪ್ರಬಲ ಅಸ್ತ್ರವಾಯಿತು ಅಂತಲೇ ಹೇಳಬಹುದು.

Leave a Reply

Your email address will not be published. Required fields are marked *