ಹಾಯ್ ಬೆಂಗಳೂರ್

ಸಾರಿಗೆ ನೌಕರರಿಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ವಾರ್ನಿಂಗ್

ಸಾರಿಗೆ ನೌಕರರು ತಮ್ಮ ಹೊಟ್ಟೆಪಾಡಿಗಾಗಿ ಪ್ರತಿಭಟನೆ ಮಾಡುತ್ತಿದ್ದರೆ ಅವರ ಮೇಲೆ ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂತ್ ಎಂಬ ಧೀರ ಪೌರುಷ ತೋರಿಸಿದ್ದಾರೆ. ಈಗ ಬೆಂಗಳೂರಿನಲ್ಲಿ ಕೋವಿಡ್ ಪ್ರೊಟೋಕಾಲ್ ಜಾರಿಯಲ್ಲಿದೆ. ಪ್ರತಿಭಟನೆ ಮಾಡುವುದಕ್ಕೆ ಅವಕಾಶವೇ ಇಲ್ಲ. ಆದರೂ ನೀವು ಪ್ರತಿಭಟನೆ ಮಾಡುತ್ತಿದ್ದೀರಿ. ಹೀಗೇ ಮುಂದುವರೆದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಅಂತ ವಾರ್ನಿಂಗ್ ಮಾಡಿದ್ದಾರೆ.

ಹೌದು, ಬೆಂಗಳೂರು ನಗರದಲ್ಲಿ ಈಗ ಸೆಕ್ಷನ್ 144 (ನಿಷೇಧಾಜ್ಞೆ) ಜಾರಿಯಲ್ಲೇನೋ ಇದೆ ಸರಿ. ಹಾಗಂತ ಸಾರಿಗೆ ನೌಕರರು ತಮ್ಮ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕು. ಈಗೇನೋ ಕೋವಿಡ್ ಜೋರಿದೆ. ಆದರೆ ಇದಕ್ಕೂ ಮೊದಲು ಏನಿತ್ತು. ಸರ್ಕಾರಕ್ಕೆ ಗರ ಬಡಿದಿತ್ತು. ಸಾರಿಗೆ ನೌಕರರ ಜೊತೆಗೆ ಏನೋ ಒಂದು ಸೆಟಲ್ ಮೆಂಟ್ ಮಾಡಿಕೊಳ್ಳೋದು ಬಿಟ್ಟು ಅವರನ್ನು ಹೀಗೆ ಬೀದೀಲಿ ಕೂರಿಸೋದು ತಪ್ಪಲ್ವಾ.

ಈಗಾಗಲೇ ಮೆಜೆಸ್ಟಿಕ್ ಗೆ ಬರುವ ಬಸ್ ಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಪ್ರಯಾಣಿಕರಿಗೆ ಗೊಂದಲ ಉಂಟಾಗುತ್ತಿದೆ. ಆಟೋಗಳಂತೂ ನಾಲ್ಕು ಪಟ್ಟು ಬಾಡಿಗೆ ಕೇಳುತ್ತಿದ್ದಾರೆ. ಪಾಪ, ಅವರಿಗೆ ದುಡ್ಡು ಮಾಡಿಕೊಳ್ಳುವುದಕ್ಕೆ ಇದೇ ಸರಿಯಾದ ಸಮಯ.

ಒಟ್ಟಿನಲ್ಲಿ ಸರ್ಕಾರ ಮಾತ್ರ ಸಾರಿಗೆ ನೌಕರರ ಬೇಡಿಕೆಗೆ ಕಿಂಚಿತ್ತೂ ಸೊಪ್ಪು ಹಾಕುತ್ತಿಲ್ಲ. ಒಂದು ವೇಳೆ ನಾಳೆ ಏನಾದರೂ ಪ್ರತಿಭಟನೆ ನಡೆಯಿತು ಅಂದರೆ ಆಗ ಎಸ್ಮಾ ಹಾಕಲಾಗುತ್ತದೆ. ಆಗ ನೌಕರರು ವಿಧಿಯಿಲ್ಲದೆ ನೌಕರಿಗೆ ಹಾಜರಾಗಬೇಕಾಗುತ್ತದೆ.

Leave a Reply

Your email address will not be published. Required fields are marked *