ಹಾಯ್ ಬೆಂಗಳೂರ್

ಪಾರಿವಾಳದ ಕಾಲಿನಲ್ಲಿ ಚೀಟಿ ಇತ್ತು ಅಂತ ಅದರ ಮೇಲೆ ಎಫ್.ಐ.ಆರ್. ಹಾಕಿದ ಬುದ್ಧಿವಂತ ಪೊಲೀಸ್

ಪಂಜಾಬ್ ನ ಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೀರಜ್ ಕುಮಾರ್ ಎಂಬ ಪೇದೆಯೊಬ್ಬನ ಬಳಿ ಹಾರಿ ಬಂದ ಈ ಪಾರಿವಾಳದ ಕಾಲಿಗೆ ಒಂದು ಚೀಟಿಯನ್ನು ಕಟ್ಟಲಾಗಿತ್ತು. ಅದನ್ನು ಬಿಚ್ಚಿ ನೋಡಿದರೆ ಎಂಥದೋ ನಂಬರ್ ಇತ್ತು. ಅದನ್ನು ನೋಡಿ ಹೆದರಿದ ಆತ ಸ್ಥಳೀಯ ಕಲಗಢ ಪೊಲೀಸ್ ಠಾಣೆಗೆ ದೂರು ನೀಡಿ ಎಫ್.ಐ.ಆರ್. ರಿಜಿಸ್ಟರ್ ಆಗುವಂತೆ ಮಾಡಿದ್ದಾನೆ.

ನೀರಜ್ ಕುಮಾರ್ ಕೆಲಸ ಮಾಡುತ್ತಿದ್ದ ಜಾಗದಿಂದ ಕೇವಲ ಐನೂರೇ ಐನೂರು ಮೀಟರ್ ಆಚೆಗೆ ಪಾಪಿ ಪಾಕಿಸ್ತಾನ ಇದೆ. ಅಲ್ಲಿಂದ ಏನೇನೋ ಬರುತ್ತೆ. ಅದರಲ್ಲಿ ಪಾರಿವಾಳ ಕೂಡ ಒಂದು. ಉಗ್ರರು ಇವತ್ತಿಗೂ ತಮ್ಮ ಕೃತ್ಯಗಳಿಗೆ ಪಾರಿವಾಳಗಳನ್ನು ಬಳಸಿಕೊಳ್ಳುತ್ತಾರೆ.

ಉಗ್ರರೇನೋ ಪಾರಿವಾಳವನ್ನು ತಮ್ಮ ಕೃತ್ಯಕ್ಕೆ ಬಳಸಿಕೊಳ್ಳುತ್ತಾರೆ ಸರಿ. ಆದರೆ ಅದರ ಮೇಲೆ ಎಫ್.ಐ.ಆರ್ ದಾಖಲು ಮಾಡಿದ್ದಾನಲ್ಲ ಭೂಪ, ಅವನೆಂಥ ಬುದ್ಧಿವಂತ ಇರಬೇಕು ನೋಡಿ. ಇಂಥ ಪೊಲೀಸರು ಇರುವುದರಿಂದಲೇ ಉಗ್ರರು ಸಲೀಸಾಗಿ ನಮ್ಮ ಗಡಿ ದಾಟಿ ಒಳಕ್ಕೆ ಬಂದು ಶೂಟ್ ಮಾಡುತ್ತಿರುವುದು.

Leave a Reply

Your email address will not be published. Required fields are marked *