ಹಾಯ್ ಬೆಂಗಳೂರ್

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಪತ್ತೆಯಾಗುತ್ತಿದೆ ಪಾಕಿಸ್ತಾನದ ನೆಟ್ ವರ್ಕ್

ಪಾಕಿಸ್ತಾನ ಮೂಲದ ಸೆಲ್ಯುಲರ್ ನೆಟ್ ವರ್ಕ್ ಸಿಗ್ನಲ್ ಗಳು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಪತ್ತೆಯಾಗುತ್ತಿರುವ ಕುರಿತು ಮಾಹಿತಿಗಳು ಬರುತ್ತಿವೆ. ಕರೇರಿ ಎಂಬಲ್ಲಿ ಇಂಥದ್ದೊಂದು ಬೆಳವಣಿಗೆ ನಡೆದಿದ್ದು ಜಿಲ್ಲಾಡಳಿತವನ್ನು ದೂರಸಂಪರ್ಕ ಇಲಾಖೆಯ ಅಧಿಕಾರಿಗಳು ಸಂಪರ್ಕ ಮಾಡಿದ್ದಾರೆ.

ಜಿಲ್ಲಾ ಕೇಂದ್ರದಿಂದ ಈ ಕರೇರಿ ಪ್ರದೇಶವು ಇಪ್ಪತ್ತಾರು ಕಿಲೋಮೀಟರ್ ದೂರದಲ್ಲಿದ್ದು ಸಮುದ್ರಮಟ್ಟದಿಂದ 2900 ಮೀಟರ್ ಎತ್ತರದಲ್ಲಿದೆ. ಅದರ ಸುತ್ತಮುತ್ತಲೂ ಯಾವುದೇ ಭಾರತೀಯ ನಂಬರ್ ಗಳು ಟ್ರ್ಯಾಕ್ ಆಗುತ್ತಿಲ್ಲ. ಕೇವಲ ಪಾಕಿಸ್ತಾನಿ ನಂಬರ್ ಮಾತ್ರ ಟ್ರ್ಯಾಕ್ ಆಗುತ್ತಿದೆ ಅಂತ ಟ್ರ್ಯಾಕರ್ ಗಳು ಹೇಳಿದ್ದಾರೆ.

ಧರ್ಮಶಾಲಾದಿಂದ ತುಂಬ ಹತ್ತಿರ ಅಂದರೂ ನೂರಾ ನಲವತ್ತು ಕಿಲೋಮೀಟರ್ ದೂರದಲ್ಲಿ ಪಾಕಿಸ್ತಾನ ಸಿಗುತ್ತದೆ. ಅಂದ ಮೇಲೆ  ಇಷ್ಟು ಹತ್ತಿರದಲ್ಲಿ ಅದ್ಹೇಗೆ ಟ್ರ್ಯಾಕ್ ಆಗಲು ಸಾಧ್ಯ? ದೂರಸಂಪರ್ಕ ಇಲಾಖೆಯ ನೀತಿ ನಿಯಮಗಳ ಪ್ರಕಾರ ಐನೂರು ಮೀಟರ್ ಗಿಂತ ಹೆಚ್ಚು ದೂರ ಸಿಗ್ನಲ್ ಪಾಸ್ ಆಗುವ ಹಾಗಿಲ್ಲ.

ಈ ಬಗ್ಗೆ ಸರಿಯಾದ ತನಿಖೆ ಆದಲ್ಲಿ ಮಹತ್ತರವಾದ ಮಾಹಿತಿ ಹೊರಬರೋದು ಗ್ಯಾರಂಟಿ.

Leave a Reply

Your email address will not be published. Required fields are marked *