ಹಾಯ್ ಬೆಂಗಳೂರ್

ನಿಖಿಲ್ ಮದುವೆಯಾಗಿ ಒಂದು ವರ್ಷ: ಇದೇ ಖುಷಿಯಲ್ಲಿ ಅವರು ಪತ್ನಿಗೆ ಏನಂತ ಬರೆದಿದ್ದಾರೆ ಗೊತ್ತಾ?

ಇವತ್ತು ನಿಖಿಲ್ ಕುಮಾರಸ್ವಾಮಿಯ ವಿವಾಹ ವಾರ್ಷಿಕೋತ್ಸವ. ನೋಡ ನೋಡುತ್ತಿದ್ದಂಗೆ ಒಂದು ವರ್ಷ ಕಳೆದು ಹೋಯಿತಾ ಅಂತ ಅನ್ನಿಸುತ್ತದೆ. ಅವತ್ತು ರಾಜ್ಯದಲ್ಲಿ ಲಾಕ್ ಡೌನ್ ಇತ್ತು. ರಾಮನಗರದಲ್ಲಿ ಅದ್ಧೂರಿಯಾಗಿ ಮದುವೆ ಮಾಡಬೇಕು ಅಂತ ಅಂದುಕೊಂಡಿದ್ದ ಕುಮಾರಸ್ವಾಮಿಯ ಕನಸಿಗೆ ಕೊರೋನಾ ತಣ್ಣೀರೆರಚಿತ್ತು.

ಅಂದಹಾಗೆ ಒಂದು ವರ್ಷದ ಸಂಭ್ರಮಕ್ಕೆ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಗೆ ಒಂದು ಅದ್ಭುತವಾದ ಲವ್ ಲೆಟರ್ ಬರೆದಿದ್ದಾರೆ. ಸರಿಯಾಗಿ ಒಂದು ವರ್ಷದ ಹಿಂದೆ ನೀನು ನನ್ನ ಜೀವನದ ಭಾಗವಾದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ಒಂದು ವರ್ಷ. ಇದು ಎಂದಿಗೂ ಮರೆಯಲಾಗದ ದಿವಸ. ನಮ್ಮನ್ನು ಆಶೀರ್ವದಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ-ಹಾರೈಕೆಗಳು ಸದಾ ಇರಲಿ ಅಂತ ರೇವತಿಗೆ ಬರೆದಿದ್ದಾರೆ ನಿಖಿಲ್.

“ಒಂದು ವರ್ಷವಾಯಿತು ನೀ ನನ್ನ ಬದುಕಿನಲಿ ಬಂದು. ಅಂದಿನಿಂದ ಇಂದಿನ ತನಕ ಮರೆಯಲಾಗದ ಸಾವಿರ ಸಾವಿರ ಘಳಿಗೆಗಳನ್ನ ನಾವಿಬ್ಬರು ಹಂಚಿಕೊಂಡಿದ್ದೇವೆ. ನಿನ್ನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ಜೀವನ ಹಾದಿಯಲಿ ಏರುಪೇರುಗಳಿರುತ್ತವೆ ನಿಜ. ಆದರೆ ಹೆಣ್ಣು ತ್ಯಾಗಜೀವಿ. ತ್ಯಾಗ ಎನ್ನೋದು ಅಷ್ಟು ಸುಲಭದ ಮಾತಲ್ಲ. ನಮ್ಮ ಸಂಸಾರ ಸುಖವಾಗಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಇದಕ್ಕಿಂತ ಸಂತೋಷ ಇನ್ನೇನು ಬೇಕು?’’

ಅಂತ ನಿಖಿಲ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *