ಹಾಯ್ ಬೆಂಗಳೂರ್

ಯಾವುದೇ ದೇಶದ ಪ್ರಜೆಗೂ ನೋ ಎಂಟ್ರಿ ಅಂದ ನ್ಯೂಜಿಲೆಂಡ್ ಪ್ರಧಾನಿ

ನ್ಯೂಜಿಲೆಂಡ್ ದೇಶದ ಪ್ರಧಾನ ಮಂತ್ರಿ ಜೆಸಿಂಡಾ ಆರ್ಡನ್ ಕಟ್ಟುನಿಟ್ಟಿನ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಭಾರತದ ದೇಶದಿಂದ ಒಂದೇ ಒಂದು ನರಪಿಳ್ಳೆ ಕೂಡ ನ್ಯೂಜಿಲೆಂಡ್ ಒಳಕ್ಕೆ ಕಾಲಿಡಕೂಡದು ಅಂತ ಆಜ್ಞೆ ಹೊರಡಿಸಿದ್ದಾರೆ.

ನಮ್ಮ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಕೂಡ ಸಾವಿರ ಸಂಖ್ಯೆಯಷ್ಟು ಹೊಸ ಕೇಸುಗಳು ದಾಖಲಾಗಿವೆ. ಕಳೆದ ಬಾರಿಗೆ ಹೋಲಿಸಿದರೆ  ಈ ಬಾರಿ ತುಸು ಹೆಚ್ಚಾಗಿದೆಯಂತೆ. ಒಂದು ಧೈರ್ಯದ ಸಂಗತಿ ಏನಪ್ಪಾ ಅಂತಂದ್ರೆ ನಮ್ಮ ಬಳಿ ಲಸಿಕೆ ಇದೆ.

ಕೇವಲ ನಮ್ಮ ದೇಶಕ್ಕಷ್ಟೇ ನೋ ಎಂಟ್ರಿ ಅಂತ ಅಂದುಕೊಳ್ಳಬೇಡಿ. ಹೊರದೇಶಗಳಿಗೆ ಹೋಗಿರುವ ನ್ಯೂಜಿಲೆಂಡ್ ಪ್ರಜೆಗಳನ್ನೂ ಸೇರಿ ಬೇರೆ ಯಾವುದೇ ದೇಶದ ಜನರಿಗೆ ಒಳಕ್ಕೆ ಪ್ರವೇಶವಿಲ್ಲ ಅಂತ ನ್ಯೂಜಿಲೆಂಡ್ ಕಟ್ಟುನಿಟ್ಟಿನ ಆದೇಶ ಹೊರಡಿಸಿಬಿಟ್ಟಿದೆ.

ನಮ್ಮ ದೇಶದಲ್ಲೂ ಅದೇ ಥರ ಮಾಡಿದರೆ ಒಂದಷ್ಟು ಪ್ರಕರಣಗಳನ್ನು ತಡೆಗಟ್ಟಬಹುದಲ್ವಾ.

 

Pm says no entry to citizen of any country

Leave a Reply

Your email address will not be published. Required fields are marked *