ಹಾಯ್ ಬೆಂಗಳೂರ್

ಸಿ.ಡಿ. ಲೇಡಿ ಕೇಸ್ ಗೆ ಹೊಸ ಟ್ವಿಸ್ಟ್: ತನಿಖಾಧಿಕಾರಿಗಳ ಎದುರು ಮರು ಹೇಳಿಕೆ

ಸಿ.ಡಿ. ಲೇಡಿ ಹೊಸ ವರಸೆ ಆರಂಭ ಮಾಡಿದ್ದಾಳೆ. ಜಡ್ಜ್ ಎದುರು ಮರು ಹೇಳಿಕೆ ನೀಡಲು ಮುಂದಾಗಿದ್ದಾಳೆ. ಆ ಮೂಲಕ ತನ್ನ ನಿಲುವನ್ನು ಆಕೆ ಬದಲಾಯಿಸಿಕೊಂಡಂತೆ ಕಾಣಿಸುತ್ತಿದೆ. ಆಕೆ ನೀಡುವ ಹೇಳಿಕೆಯ ಮೇಲೆ ರಮೇಶ್ ಜಾರಕಿಹೊಳಿಯ ಭವಿಷ್ಯ ಕೂಡ ನಿರ್ಧಾರವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಯಾರು ಆಕೆಯಿಂದ ಈ ದರಿದ್ರ ಕೆಲಸವನ್ನು ಮಾಡಿಸಿದ್ದರೋ ಅದೇ ಪವರ್ ಫುಲ್ ಪೊಲಿಟೀಷಿಯನ್ ಈಗ ಇನ್ನಷ್ಟು ಧೈರ್ಯವನ್ನು ತುಂಬಿರಬಹುದು. ಹಾಗಾಗಿ ಆ ಲೇಡಿ ಈ ರೀತಿ ಉಲ್ಟಾ ಹೊಡೆದಿದ್ದಾಳೆ ಅಂತ ಹೇಳಲಾಗ್ತಿದೆ. ಹಾಗಾದರೆ ಅವತ್ತು ಯಾಕೆ ಜಡ್ಜ್ ಮುಂದೆ ಬೇರೆ ಹೇಳಿಕೆ ನೀಡಿದ್ದು ಅಂತ ಕೇಳಿದರೆ ಬೆದರಿಕೆ ಇತ್ತು ಅಂತ ಹೇಳುತ್ತಾಳೆ.

ಸದ್ಯ ಎಸ್.ಐ.ಟಿ.ಯ ಅಧಿಕಾರಿ ಕವಿತಾ ಮುಂದೆ ಹೇಳಿಕೆ ನೀಡುತ್ತಿರುವ ಈ ಮಹಿಳಾಮಣಿ ಹಳೆಯದ್ದೆಲ್ಲವನ್ನೂ ಒದರುತ್ತಿದ್ದಾಳೆ. ಈಕೆಯನ್ನು ಹನಿ ಟ್ರ್ಯಾಪ್ ಗೆ ಬಳಸಿಕೊಂಡಿದ್ದೇ ನರೇಶ್ ಮತ್ತು ಶ್ರವಣ್. ಇವರಿಬ್ಬರು ಒಂದು ಕಾಲದಲ್ಲಿ ಪತ್ರಿಕೋದ್ಯೋಗಿಗಳು ಅಂತ ಹೇಳಿಕೊಳ್ಳುತ್ತಿದ್ದರು. ಅಲ್ಲಿ ಬೇಗ ಶ್ರೀಮಂತರಾಗಲು ಸಾಧ್ಯವಿಲ್ಲ. ತಾಳ್ಮೆ ಬೇಕು. ಅದು ಅವರಿಗೆ ಇರಲಿಲ್ಲ. ಹಾಗಾಗಿ ತಲೆ ಹಿಡಿಯುವ ಕೆಲಸ ಮಾಡಲು ಮುಂದಾದರು ಎನ್ನುವುದು ನಿಸ್ಸಂಶಯ. ಒಟ್ಟಿನಲ್ಲಿ ಸಿ.ಡಿ. ಲೇಡಿಯು ಯಾರದೋ ಕೈಬುಗುರಿಯಾಗಿರೋದಂತೂ ಖಚಿತ. ಅವರು ಹೆಂಗೆ ಆಡಿಸುತ್ತಿದ್ದಾರೋ ಈಕೆ ಹಂಗೆ ಆಡುತ್ತಿದ್ದಾಳೆ ಅಷ್ಟೆ.

ಇದನ್ನು ಅರ್ಥ ಮಾಡಿಕೊಳ್ಳಬೇಕಾದುದು ಎಸ್.ಐ.ಟಿ ಎಂಬ ಪ್ರವೀಣರ ತಂಡ. ಯಾವುದಕ್ಕೂ ಅಂಜದೆ, ಅಳುಕದೆ ತನಿಖೆ ಮಾಡಿದಲ್ಲಿ ಈ ಪ್ರಕರಣವನ್ನು ಭೇದಿಸೋದು ಜಸ್ಟ್ ಐದು ನಿಮಿಷದ ಕೆಲಸ. ಪೊಲೀಸರು ಮೊದಲು ಅದನ್ನು ಮಾಡಿ, ಆರೋಪಿಗಳನ್ನು ಜೈಲಿಗಟ್ಟಲಿ.

Leave a Reply

Your email address will not be published. Required fields are marked *