ಹಾಯ್ ಬೆಂಗಳೂರ್

ಈ ಬಾರಿ ಸರಿಯಾದ ಟೈಮಿಗೆ ಆಗಮಿಸಲಿದೆ ಮುಂಗಾರು ಮಳೆ

ಬಿಸಿಲಿನ ಝಳ ತಡೆಯೋಕಾಗ್ತಿಲ್ಲ ಅಂತ ಏಸಿ ಆನ್ ಮಾಡಿಕೊಂಡು ಕೂರೋರಿಗೆಲ್ಲ ಇನ್ನೊಂದುವರೆ ತಿಂಗಳಲ್ಲಿ ಗುಡ್ ನ್ಯೂಸ್ ಕಾದಿದೆ. ಹೌದು, ಜೂನ್ ಮೊದಲನೇ ವಾರದಿಂದ ಮುಂಗಾರು ಮಳೆ ಆರಂಭವಾಗಲಿದೆ. ಈ ಬಾರಿ ಜೂನ್ ನಿಂದ ಸೆಪ್ಟಂಬರ್ ತನಕ ಪ್ರಾಕೃತಿಕವಾಗಿ ಮುಂಗಾರು ಮಳೆ ಸುರಿಯಲಿದೆ ಅಂತ ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯವಾಗಿ 98 ಪರ್ಸೆಂಟ್ ನಷ್ಟು ಮುಂಗಾರು ಎಂದಿನಂತೆ ಸಾಮಾನ್ಯವಾಗೇ ಇರಲಿದೆ. ಎಲ್ಲೋ ಒಮ್ಮೊಮ್ಮೆ ಐದು ಪರ್ಸೆಂಟ್ ಪ್ಲಸ್ ಅಥವಾ ಮೈನಸ್ ಆಗಬಹುದು ಅಂತ ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ಮಾಧವನ್ ರಾಜೀವನ್ ಮಾಹಿತಿ ನೀಡಿದ್ದಾರೆ.

ಯಾವುದಕ್ಕೂ ಮೇ ಕೊನೇ ವಾರದಲ್ಲಿ ಮತ್ತೆ ಭಾರತೀಯ ಹವಾಮಾನ ಇಲಾಖೆಯು ಮುಂಗಾರಿನ ಆಗಮನದ ಬಗ್ಗೆ ತಿಳಿಸಲಿದೆ. ಖಾಸಗಿ ಹವಾಮಾನ ಇಲಾಖೆ ಸ್ಕೈಮೆಟ್ ವೆದರ್ ಸಹ ಈ ಬಾರಿ ಮುಂಗಾರು ಮಳೆ ಅವಧಿಗೆ ತಕ್ಕಂತೆ ಜೂನ್ ಆರಂಭದಿಂದ ಸೆಪ್ಟಂಬರ್ ಕೊನೇ ತನಕ ಇರಲಿದೆ ಅಂತ ಮುನ್ಸೂಚನೆ ನೀಡಿದೆ.

Leave a Reply

Your email address will not be published. Required fields are marked *