ಹಾಯ್ ಬೆಂಗಳೂರ್

ಮಂತ್ರಿಗಳ ಸಹಾಯಕರಿಗೆ ಹೀಗಾದರೆ ಜನಸಾಮಾನ್ಯರ ಪಾಡೇನು?

ಇಂದು ಸಚಿವ ಸುರೇಶ್ ಕುಮಾರ್ ಅವರ ಪಾಲಿಗೆ ಅತ್ಯಂತ ದುಃಖದ ದಿನ. ಯಾಕೆಂದರೆ ಅವರ ಆಪ್ತ ಸಹಾಯಕ ರಮೇಶ್ ಡೆಡ್ಲಿ ಕೊರೋನಾಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಅವರನ್ನು ಉಳಿಸಿಕೊಳ್ಳಲಿಕ್ಕೆ ಮಿನಿಸ್ಟರ್ ಸುರೇಶ್ ಕುಮಾರ್ ಗೆ ಆಗಲಿಲ್ಲ. ಅದಕ್ಕೆ ಕಾರಣ ಕೇಳಿದರೆ ಆಶ್ಚರ್ಯವಾಗುತ್ತದೆ.

ರಮೇಶ್ ಗೆ ಕೋವಿಡ್ ಪಾಸಿಟಿವ್ ಇದೆ ಅಂತ ರಿಪೋರ್ಟ್ ಬಂದ ಮೇಲೆ ಅವರನ್ನು ಆಸ್ಪತ್ರೆಗೆ ಸೇರಿಸಲು ಅವರ ಕುಟುಂಬಸ್ಥರು ಹೋಗಿದ್ದಾರೆ. ಆಗ ಅವರಿಗೆ ವೆಂಟಿಲೇಟರ್ ಸಿಕ್ಕಿಲ್ಲ. ಸುಮಾರು ಆಸ್ಪತ್ರೆಗಳನ್ನು ಅಲೆದ ಮೇಲೂ ಅವರಿಗೆ ವೆಂಟಿಲೇಟರ್ ಸಿಕ್ಕಿಲ್ಲ.

ವೆಂಟಿಲೇಟರ್ ಸಿಗದಿದ್ದ ಮೇಲೆ ಎಷ್ಟು ಹೊತ್ತು ಅಂತ ಜೀವ ಬದುಕಿರೋಕೆ ಸಾಧ್ಯ. ರಮೇಶ್ ಕೊನೆಯುಸಿರೆಳೆದಿದ್ದಾರೆ. ಐವತ್ತೈದು ವರ್ಷ ವಯಸ್ಸಾಗಿದ್ದ ರಮೇಶ್ ಅವರು ಮಂತ್ರಿಗಳ ಆಪ್ತ ಸಹಾಯಕರು. ಅಂಥವರಿಗೆ ಹೀಗಾದರೆ ಇನ್ನು ಸಾಮಾನ್ಯ ಜನರ ಪಾಡಂತೂ ಹೇಳತೀರದು.

Leave a Reply

Your email address will not be published. Required fields are marked *