ಹಾಯ್ ಬೆಂಗಳೂರ್

ಮತ್ತೆ ಲಾಕ್ ಡೌನ್ ಭೀತಿ: ಊರಿನತ್ತ ಹೊರಟಿದೆ ವಲಸಿಗರ ಪಡೆ

ದೆಹಲಿಯಲ್ಲಿ ದಿನದಿಂದ ದಿನಕ್ಕೆ ಸಾವಿರಾರು ಕೊರೋನಾ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಅಲ್ಲಿನ ವಲಸಿಗರು ಕಂಗಾಲಾಗಿದ್ದಾರೆ. ಎಲ್ಲಿ ಮತ್ತೆ ಮೋದಿ ಲಾಕ್ ಡೌನ್ ಮಾಡುತ್ತಾರೋ ಅಂತ ಈಗಲೇ ತಮ್ಮ ತಮ್ಮ ಊರಿಗೆ ಗಂಟುಮೂಟೆ ಕಟ್ಟುತ್ತಿದ್ದಾರೆ.

ದೆಹಲಿ ಮಾತ್ರವಲ್ಲದೆ ಮುಂಬೈನಲ್ಲೂ ವಲಸಿಗರು ಹೆದರಿಕೊಂಡಿದ್ದಾರೆ. ಕಳೆದ ಬಾರಿ ಆದ ಹಾಗೆ ತೊಂದರೆಗೆ ಸಿಲುಕಿಕೊಳ್ಳಬಾರದು. ಹೇಗೋ ಈಗಲೇ ನಮ್ಮ ನಮ್ಮ ಊರುಗಳಿಗೆ ಹೋಗಿ ಸೇರಿಕೊಂಡುಬಿಟ್ಟರೆ ಮೂರು ಹೊತ್ತು ಊಟಕ್ಕೆ ತೊಂದರೆ ಇರೋದಿಲ್ಲ. ಹಳ್ಳಿಗಳಲ್ಲಿ ಹೇಗೋ ಜೀವನ ನಡೆದು ಹೋಗುತ್ತದೆ ಅಂತ ಲೆಕ್ಕ ಹಾಕಿ ಬಸ್ ಹತ್ತುತ್ತಿದ್ದಾರೆ.

ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿಯಾಗಿದೆ. ಪುಣೆಯಲ್ಲಿ ಹೊಟೇಲ್ ಗಳು, ಬಾರ್ ಅಂಡ್ ರೆಸ್ಟೋರೆಂಟ್ ಗಳು ಬಂದ್ ಆಗುತ್ತಿರುವುದರಿಂದ ಶೇ. 50ಕ್ಕೂ ಹೆಚ್ಚು ನೌಕರರು ತಮ್ಮ ತಮ್ಮ ಊರಿನ ಹಾದಿ ಹಿಡಿದಿದ್ದಾರೆ.

ನಮ್ಮ ರಾಜ್ಯದಲ್ಲಿ ಸದ್ಯಕ್ಕೆ ಆ ಥರದ ಪರಿಸ್ಥಿತಿ ಇಲ್ಲವಾದರೂ ಶೀಘ್ರದಲ್ಲೇ ಅದು ಬದಲಾಗಿದೆ ಎಂದು ವೈದ್ಯರು ಲೆಕ್ಕ ಹಾಕಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರಿಗಂತೂ ಸಾಕು ಸಾಕಾಗಿ ಹೋಗಿದೆ. ಹೇಗೋ ಕಡಿಮೆಯಾಯಿತಲ್ಲಪ್ಪ ಅಂತ ಅಂದುಕೊಂಡರೆ ಮತ್ತೆ ಬಂದು ವಕ್ಕರಿಸಿತಲ್ಲ ಅಂತ ಅವರೂ ತಲೆಕೆಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *