ಹಾಯ್ ಬೆಂಗಳೂರ್

ಕಳೆದ ಇಪ್ಪತ್ತನಾಲ್ಕು ಗಂಟೇಲಿ ಒಂದು ಲಕ್ಷ ಕೇಸ್ ದಾಖಲು

ಶುರುವಾದಾಗಿನಿಂದ ಕೋವಿಡ್ 19ರ ಅಟ್ಟಹಾಸ ನಿಯಂತ್ರಣ ತಪ್ಪಿ ಹೋಗುತ್ತಿದೆ. ಮೊದಲನೆ ಅಲೆ ಹೇಗೋ ಕಡಿಮೆಯಾಯಿತಲ್ಲ ಅಂತ ಸ್ವಲ್ಪ ನೆಮ್ಮದಿಯಿಂದ ಇದ್ದರೆ ಅನಿಷ್ಟ ಇನ್ನೂ ಕಡಿಮೆಯಾಗಿಲ್ಲ, ಅದರ ಬದಲು ಇನ್ನೂ ಜಾಸ್ತಿಯಾಗಿಬಿಟ್ಟಿದೆ. ನಿನ್ನೆ ಒಂದೇ ದಿನದಲ್ಲಿ ಇಡೀ ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಪರಿಸ್ಥಿತಿ ಹೀಗಿರುವಾಗ ಮಹಾರಾಷ್ಟ್ರ ಮತ್ತು ದೆಹಲಿ ಸೇರಿದಂತೆ ಅನೇಕ ಕಡೆ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ ಆರು ಗಂಟೆಯ ತನಕ ನೈಟ್ ಕರ್ಫ್ಯೂ ಹೇರಲಾಗುತ್ತಿದೆ. ವೀಕೆಂಡ್ ಗಳಲ್ಲಂತೂ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತಿದೆ.

ರಾಜ್ಯದಲ್ಲೂ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಬಿಗಿ ಕ್ರಮಗಳನ್ನು ಜಾರಿಗೊಳಿಸಲಾಗುವುದು ಅಂತ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

 

Leave a Reply

Your email address will not be published. Required fields are marked *