ಹಾಯ್ ಬೆಂಗಳೂರ್

ಮಣಿಪಾಲ್ ಆಸ್ಪತ್ರೆಯಲ್ಲಿ ರೂಂ ಸಿಗಲಿಲ್ಲ ಅಂತ ಬೇಸರಗೊಂಡ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಕೋವಿಡ್ ಪಾಸಿಟಿವ್ ತಗುಲಿಕೊಂಡಿದೆ. ಅಷ್ಟೇ ಅಲ್ಲ ಅವರ ಮಗ ನಿಖಿಲ್ ಕುಮಾರಸ್ವಾಮಿಗೂ ಈ ಮಹಾಮಾರಿ ಅಂಟಿಕೊಂಡಿದೆ. ಬಸವಕಲ್ಯಾಣದಲ್ಲಿ ಪ್ರಚಾರ ಮುಗಿಸಿಕೊಂಡು ವಾಪಸ್ ಹಿಂದಿರುಗಿದ ಕುಮಾರಸ್ವಾಮಿಯವರು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಅವರಿಗೆ ಸೋಂಕು ಇದೆ ಎನ್ನುವುದು ಇಂದು ಬೆಳಗ್ಗೆ ಧೃಡವಾಯಿತು.

ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯೋಣ ಅಂತ ಹೇಳಿ ಹಳೇ ಏರ್ ಪೋರ್ಟ್ ರಸ್ತೆಯಲ್ಲಿರುವ ಪ್ರತಿಷ್ಠಿತ ಮಣಿಪಾಲ್ ಆಸ್ಪತ್ರೆಗೆ ಹೋದರೆ ಅಲ್ಲಿ ರೂಂ ಇಲ್ಲ ಅಂದುಬಿಟ್ಟರು. ಇದರಿಂದ ಕುಮಾರಸ್ವಾಮಿಗೆ ಬಹಳ ಬೇಸರವಾಯಿತು. ಸರಿ ಇನ್ನೇನು ಮಾಡೋದು ಅಂತೇಳಿ ಬನ್ನೇರುಘಟ್ಟ ರಸ್ತೆಯಲ್ಲಿ ಇರುವ ಅಪೋಲೋ ಆಸ್ಪತ್ರೆಗೆ ಹೋಗಿ ದಾಖಲಾದರು.

ಇದರ ಬೆನ್ನಿಗೆ ನಿಖಿಲ್ ಕುಮಾರಸ್ವಾಮಿ ಕೂಡ ಸೋಂಕಿತರಾಗಿದ್ದು ಯಾರು ಹೆದರಬೇಡಿ ಅಂತ ಐಸೊಲೇಷನ್ ಗೆ ಒಳಗಾಗಿಬಿಟ್ಟಿದ್ದಾರೆ. ಕುಮಾರಣ್ಣ ಮತ್ತು ಅವರ ಮಗ ಆದಷ್ಟು ಬೇಗ ಗುಣಮುಖರಾಗಿ ಹೊರಬರಲಿ ಅಂತ ಅವರ ಅಭಿಮಾನಿಗಳು, ಕುಟುಂಬಸ್ಥರು ಮತ್ತು ಆಪ್ತರು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *