ಹಾಯ್ ಬೆಂಗಳೂರ್

ಸಾರಿಗೆ ನೌಕರರ ಕೂಗನ್ನು ಸರ್ಕಾರ ಏಕೆ ಆಲಿಸುತ್ತಿಲ್ಲ?

ಉರಿ ಬಿಸಿಲಿನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಿರುವುದನ್ನು ನೋಡಿದರೆ ಎಂಥವರಿಗಾದರೂ ಮನಸ್ಸು ಕರಗದೆ ಇರದು. ಅವರದು ನಿನ್ನೆ ಮೊನ್ನೆ ಇಟ್ಟ ಬೇಡಿಕೆಯೇನಲ್ಲ. ಅದಕ್ಕೆ ಒಂದಷ್ಟು ವರ್ಷಗಳ ಇತಿಹಾಸವಿದೆ. ಎಲ್ಲರಿಗೂ ಸಮನಾಗಿ ನೋಡಿಕೊಳ್ಳಿ. ಆರನೇ ವೇತನ ಜಾರಿ ಮಾಡಿ ಅಂತ ಬೇಡಿಕೆ ಇಡುತ್ತಿದ್ದಾರೆ. ಇದನ್ನು ಈಡೇರಿಸಲಿಕ್ಕೆ ಸರ್ಕಾರಕ್ಕೆ ಅದೇನು ಧಾಡಿಯೋ ಅಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಸರ್ಕಾರದಿಂದ ಯಾವುದನ್ನೇ ಪಡೆಯಬೇಕು ಅಂದರೂ ಅದಕ್ಕೆ ಪ್ರತಿಭಟನೆ ಮಾಡಲೇಬೇಕಾ. ಕಾಲದಿಂದ ಕಾಲಕ್ಕೆ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯವಲ್ಲವಾ. ಸಿಬ್ಬಂದಿಗಳು ಹೀಗೆ ಧರಣಿ ಕುಳಿತರೆ ಅದರಿಂದ ಜನರಿಗೂ ತೊಂದರೆ ಆಗುತ್ವೆ ಅಲ್ವಾ ಅಂತ ಪ್ರಶ್ನಿಸುತ್ತಿರುವ ಸಾರ್ವಜನಿಕರಿಗೆ ಈ ಜನ್ಮದಲ್ಲಿ ಸಾರಿಗೆ ಇಲಾಖೆಯ ಸಚಿವ ಲಕ್ಷ್ಮಣ ಸವದಿ ಉತ್ತರಿಸಲಾರರು.

ಅಂದಹಾಗೆ ನಾಳೆಯಿಂದ ಎಲ್ಲ ನಗರಗಳ ಲೋಕಲ್ ಬಸ್ ಗಳು ಸಂಚಾರವನ್ನು ಸ್ಥಗಿತಗೊಳಿಸಲಿವೆ. ಇದರಿಂದಾಗಿ ಸ್ಥಳೀಯರಿಗೆ ಸಾಕಷ್ಟು ತೊಂದರೆ ಉಂಟಾಗಲಿದೆ. ಅದೆಂದಿಗೆ ಸಾರಿಗೆ ನೌಕರರ ಬೇಡಿಕೆಗಳು ಈಡೇರುತ್ತವೋ ಇಲ್ಲವ ಅದನ್ನು ಆ ದೇವರೇ ಬಲ್ಲ,

Leave a Reply

Your email address will not be published. Required fields are marked *