ಹಾಯ್ ಬೆಂಗಳೂರ್

ಅಪಾಯ ಆಗುತ್ತೆ ಅಂತ ನಟ ಶ್ರೀಮುರಳಿಗೆ ಗೊತ್ತಿರಲಿಲ್ವಾ?

ಮದಗಜ ಚಿತ್ರದ ಶೂಟಿಂಗ್ ವೇಳೆ ನಾಯಕ ನಟ ಶ್ರೀಮುರಳಿಗೆ ಪೆಟ್ಟಾಗಿದೆ. ಡೂಪ್ ಇಲ್ಲದೆ ಒರಿಜಿನಲ್ ಆಗಿ ಮಾಡೋಕೆ ಹೋಗಿ ಅವರು ಈ ರೀತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಳೆದ ಒಂದು ವಾರದಿಂದ ಕಂಠೀರವ ಸ್ಟುಡಿಯೋದಲ್ಲಿ ಮದಗಜದ ಶೂಟಂಗ್ ನಡೀತಿದೆ.

ಒಂದು ಫೈಟಿಂಗ್ ಅನ್ನು ಐದು ದಿನಗಳ ಕಾಲ ಚಿತ್ರೀಕರಣ ಮಾಡಲಾಗುತ್ತಿದೆ. ಮುನ್ನೂರಕ್ಕೂ ಹೆಚ್ಚು ಮಂದಿ ಜೂನಿಯರ್ ಆರ್ಟಿಸ್ಟ್ ಗಳು ಈ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ನಮ್ಮ ನಾಯಕ ನಟ ಮುರಳಿ ನಿನ್ನೆ ರಾತ್ರಿ ಫೈಟಿಂಗ್ ಚಿತ್ರೀಕರಣದ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಮಂಡಿಗೆ ತೀವ್ರವಾಗಿ ಏಟಾಗಿದೆ. ವೈದ್ಯರು ಕಡಿಮೆ ಅಂದರೂ ಹದಿನೈದು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ ಅಂತ ನಿರ್ದೇಶಕ ಮಹೇಶ್ ಹೇಳಿದ್ದಾರೆ. ಇದರಿಂದ ನಿಜಕ್ಕೂ ನಿರ್ದೇಶಕರು ಮತ್ತು ನಿರ್ಮಾಪಕರು ಕಂಗಾಲಾಗಿದ್ದಾರೆ.

ಚಿತ್ರದ ಶೂಟಿಂಗ್ ಈಗ ನಾಲ್ಕನೇ ಶೆಡ್ಯೂಲ್ ಗೆ ಬಂದು ನಿಂತಿದೆ. ಇದೊಂದು ದೊಡ್ಡ ಪ್ರಾಜೆಕ್ಟ್ ಆಗಿದ್ದು ನಾಲ್ಕು ಭಾಷೆಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಉತ್ತರಪ್ರದೇಶ ಸೇರಿದಂತೆ ಉತ್ತರ ಭಾರತದ ಅನೇಕ ಕಡೆ ಶೂಟಿಂಗ್ ಆಗಿದೆ.

ಇತ್ತೀಚೆಗಷ್ಟೇ ಚಿತ್ರತಂಡವು ರಾಬರ್ಟ್ ಚಿತ್ರದ 25ನೇ ದಿನದ ಸಮಾರಂಭವನ್ನು ಆ ಚಿತ್ರದ ನಿರ್ಮಾಪಕ ಉಮಾಪತಿಯೊಂದಿಗೆ ಆಚರಿಸಿಕೊಂಡಿತು.

Leave a Reply

Your email address will not be published. Required fields are marked *