ಹಾಯ್ ಬೆಂಗಳೂರ್

ದೇಶದ ಪರಿಸ್ಥಿತಿಯನ್ನು ನೆನೆಸಿಕೊಂಡರೆ ಅಕ್ಷರಶಃ ಭಯ ಎನಿಸುತ್ತದೆ

ದೇಶ ಮತ್ತೊಮ್ಮೆ ಲಾಕ್ ಡೌನ್ ಆಗುವ ಎಲ್ಲಾ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತಿದೆ. ಯಾಕೆಂದರೆ ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಯೊಳಗೆ ದಾಖಲಾಗಿರುವ ಹೊಸ ಪ್ರಕರಣಗಳ ಸಂಖ್ಯೆ ಬರೋಬ್ಬರಿ 1,45,384. ಇದನ್ನೂ ಸೇರಿಸಿಕೊಂಡರೆ ಒಟ್ಟು ಸೋಂಕಿತರ ಸಂಖ್ಯೆ 1,32,05,926.

ಸ್ವಲ್ಪ ಸಮಾಧಾನಕರ ಸಂಗತಿ ಏನಪ್ಪಾ ಅಂತಂದ್ರೆ ಕಳೆದ 24 ಗಂಟೆಯಲ್ಲಿ 77,567 ಮಂದಿ ಗುಣಮುಖರಾಗಿ ಹೊರಬಂದಿದ್ದಾರೆ. ಹಾಗಂತ ಸಂಪೂರ್ಣ ಸಮಾಧಾನವಾಗಿ ಇರಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಒಂದೇ ದಿನದಲ್ಲಿ ಏಳುನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿರುವುದು.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಪ್ರಕಾರ ನೆನ್ನೆ ಶುಕ್ರವಾರ 11,73,219 ಹೊಸ ಸ್ಯಾಂಪಲ್ಸ್ ಗಳನ್ನು ಪರೀಕ್ಷೆ ಮಾಡಲಾಗಿದೆ. ಇದನ್ನೂ ಸೇರಿಸಿಕೊಂಡರೆ ಇಲ್ಲೀ ತನಕ ಒಟ್ಟು 25 ಕೋಟಿ 52 ಲಕ್ಷ 14 ಸಾವಿರದ 803 ಮಂದಿಯು ಪರೀಕ್ಷೆಗೆ ಒಳಗಾಗಿದ್ದಾರೆ.

ಒಟ್ಟಿನಲ್ಲಿ ಕಳೆದ ವರ್ಷದಂತೆ ಈ ವರ್ಷ ಕೂಡ ತಿಂಗಳಾನುಗಟ್ಟಲೆ ಲಾಕ್ ಡೌನ್ ಆಗಬಾರದು ಅಂದರೆ ಪ್ರಧಾನಿಗೆ ಜನರು ಧೈರ್ಯ ತುಂಬಬೇಕು.

Leave a Reply

Your email address will not be published. Required fields are marked *