ಹಾಯ್ ಬೆಂಗಳೂರ್

ಇಂದು ರಾತ್ರಿ ನಭೋಮಂಡಲದಲ್ಲಿ ಅದ್ಭುತವಾದ ವಿಸ್ಮಯ ನಡೆಯಲಿದೆ, ತಪ್ಪದೆ ವೀಕ್ಷಿಸಿ

ಇವತ್ತು ಖಗೋಳ ವಿಜ್ಞಾನಿಗಳಿಗೆ ಮತ್ತು ಜ್ಯೋತಿಷ್ಯ ಶಾಸ್ತ್ರಜ್ಞರಿಗೆ ಅತ್ಯಂತ ಪ್ರಿಯಪಾದ ದಿನ. ಯಾಕೆಂದರೆ ಭೂಮಿ ಮತ್ತು ಮಂಗಳನ ನಡುವೆ ಚಂದ್ರ ಬರಲಿದ್ದಾನೆ. ಇದನ್ನು ಭಾರತ, ಇಂಡೋನೇಷ್ಯಾ ಮತ್ತು ದಕ್ಷಿಣ ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿರುವ ಜನರು ಮಾತ್ರ ನೋಡಬಹುದಾಗಿದೆ.

ಈ ಖಗೋಳ ವಿಸ್ಮಯದಲ್ಲಿ ಚಂದ್ರ ಗ್ರಹ ಸುಮಾರು ಒಂದುವರೆ ಗಂಟೆಗಳ ಕಾಲ ಮಂಗಳ ಗ್ರಹವನ್ನು ಸಂಪೂರ್ಣ ಮುಚ್ಚಿಕೊಳ್ಳುತ್ತದೆ. ಇಂಥ ವಿಸ್ಮಯವನ್ನು ವರ್ಷಕ್ಕೆ ಎರಡು ಬಾರಿ ಭೂಮಿಯಿಂದ ನೋಡಬಹುದಾಗಿದೆ.

ಇಂದು ರಾತ್ರಿ ಭಾರತದಲ್ಲಿ ಸಾಮಾನ್ಯ ಜನರ ಕಣ್ಣಿಗೆ ಚಂದ್ರನ ಪಕ್ಕದಲ್ಲಿ ಒಂದು ಕೆಂಪು ಚುಕ್ಕೆಯ ರೂಪದಲ್ಲಿ ಮಂಗಳ ಗ್ರಹ ಕಾಣಿಸಿಕೊಳ್ಳುತ್ತದೆ. ಇತ್ತೀಚೆಗೆ ಇದೇ ತರಹದ ವಿಸ್ಮಯವು ದಕ್ಷಿಣ ಅಮೆರಿಕಾ ಮತ್ತು ಆಫ್ರಿಕಾದಲ್ಲಿ ಕಾಣಿಸಿಕೊಂಡಿತ್ತು.

Leave a Reply

Your email address will not be published. Required fields are marked *