ಹಾಯ್ ಬೆಂಗಳೂರ್

ಜಮ್ಮು ಕಾಶ್ಮೀರದ ಶೋಪಿಯನ್ ನಲ್ಲಿ ಉಗ್ರರ ದಾಳಿ: ಭಾರತೀಯ ಯೋಧರ ತಿರುಗೇಟು

ಶೋಪಿಯನ್ ಸೆಕ್ಟರ್ ನಲ್ಲಿ ಯೋಧರ ಸರ್ಪಗಾವಲು

ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಬಾಲ ಬಿಚ್ಚತೊಡಗಿದ್ದಾರೆ. ಇಷ್ಟು ದಿನ ಪ್ರಶಾಂತವಾಗಿದ್ದ ವಾತಾವರಣ ಮತ್ತೆ ಹದಗೆಡತೊಡಗಿದೆ. ಇಂದು ಮಧ್ಯಾಹ್ನ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಅಪ್ರೋಚದಿತ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಭದ್ರತಾ ಪಡೆಗಳ ಕೈಗೆ ತಗಲಾಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಶೋಪಿಯನ್ ಟೌನ್ ನ ಜನ್ ಮೊಹಲ್ಲಾದಲ್ಲಿ ಈ ಚಕಮಕಿ ನಡೆದಿದ್ದು ಇನ್ನೂ ಅನೇಕ ಉಗ್ರರು ಬಚ್ಚಿಟ್ಟುಕೊಂಡಿದ್ದಾರೆ. ಅವರನ್ನು ಭದ್ರತಾ ಪಡೆಯ ಯೋಧರು ಹುಡುಕುತ್ತಿದ್ದಾರೆ.

ಉಗ್ರರ ಎನ್ ಕೌಂಟರ್ ಕುರಿತು ಶೋಪಿಯನ್ ಸೆಕ್ಟರ್ ನ ಪೊಲೀಸ್ ಪಡೆ ಟ್ವೀಟ್ ಮಾಡಿದೆ. ಉಗ್ರರ ದಾಳಿಗೆ ಪೊಲೀಸರು ಮತ್ತು ಯೋಧರು ಸರಿಯಾಗಿ ತಿರುಗೇಟು ನೀಡಿದ್ದು ರಕ್ಷಣಾ ಕಾರ್ಯ ಚುರುಕಾಗಿದೆ ಅಂತ ಟ್ವಿಟ್ಟರ್ ನಲ್ಲಿ ಪೊಲೀಸರು ಬರೆದಿದ್ದಾರೆ.

 

Leave a Reply

Your email address will not be published. Required fields are marked *