ಹಾಯ್ ಬೆಂಗಳೂರ್

ದೇಶದ ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್

ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಯ ಐಸಿಯುನಿಂದ ಸ್ಪೆಷಲ್ ವಾರ್ಡ್ ಗೆ ಈಗಷ್ಟೇ ಶಿಫ್ಟ್ ಮಾಡಲಾಗಿದೆ. ಮೊನ್ನೆ ಬೈಪಾಸ್ ಸರ್ಜರಿಗೆ ಒಳಗಾಗಿದ್ದ ಅವರ ಆರೋಗ್ಯ ಸುಧಾರಿಸುತ್ತಿದೆ. ಹಾಗಂತ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳು ಹೆಲ್ತ್ ಬುಲೆಟಿನ್ ನಲ್ಲಿ ಹೇಳಿದ್ದಾರೆ.

ಆಸ್ಪತ್ರೆಯ ಮೂಲಗಳಲ್ಲದೆ ರಾಷ್ಟ್ರಪತಿ ಭವನದ ಅಧಿಕಾರಿಗಳೂ ಸಹ ಟ್ವೀಟ್ ಮಾಡಿದ್ದಾರೆ. “ರಾಷ್ಟ್ರಪತಿಗಳ ಆರೋಗ್ಯ ಚೇತರಿಕೆಯಾಗುತ್ತಿದೆ. ನಾಲ್ಕು ನಾಲ್ಕು ವೈದ್ಯರು ವಿವಿಧ ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಾ ಅವರ ಆರೋಗ್ಯದಲ್ಲಾಗುವ ಏರುಪೇರನ್ನು ಗಮನಿಸುತ್ತಲೇ ಇದ್ದಾರೆ. ವೈದ್ಯರಲ್ಲದೆ ನರ್ಸ್ ಗಳು ಮತ್ತು ಆಯಾಗಳು ಕೂಡ ಹಗಲುರಾತ್ರಿ ಶ್ರಮ ವಹಿಸುತ್ತಿದ್ದಾರೆ” ಅಂತ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

“ನಾನು ಆಸ್ಪತ್ರೆ ಸೇರಿದಾಗಿನಿಂದ ದೇಶದಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ಜನರು ನನ್ನ ಆರೋಗ್ಯ ಸರಿ ಹೋಗಲಿ ಅಂತ ಪ್ರಾರ್ಥಿಸುತ್ತಿದ್ದಾರೆ. ಅವರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ” ಅಂತ ರಾಷ್ಟ್ರಪತಿಗಳು ಭಾವುಕರಾಗಿ ತಮ್ಮ ಟ್ವೀಟ್ ಸಂದೇಶದಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *