ಹಾಯ್ ಬೆಂಗಳೂರ್

ಹರಿಯಾಣದ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಅಲ್ಲೇ ಇದೆ ಅಂತ ಕಳ್ಳನಿಗೆ ಹೇಗೆ ಗೊತ್ತಾಯ್ತು?

ಹರಿಯಾಣದ ಜಿಂದ್ ಪಿ.ಪಿ.ಸೆಂಟರ್ ಜನರಲ್ ಆಸ್ಪತ್ರೆಯಲ್ಲಿ ಒಂದು ಸಾವಿರ ಏಳುನೂರ ಹತ್ತು ಡೋಸ್ ಕೋವ್ಯಾಕ್ಸಿನ್ ಲಸಿಕೆ ಕಳ್ಳತನವಾಗಿದೆ. ಕಳ್ಳರು ನಿನ್ನೆ ರಾತ್ರಿ ಸ್ಟೋರ್ ರೂಮ್ ನ ಒಡೆದು ಹಾಕಿ ಇಷ್ಟೊಂದು ಲಸಿಕೆಯನ್ನು ಹೊತ್ತೊಯ್ದಿದ್ದಾರೆ. ತಮಾಷೆ ಅಂದರೆ ಸ್ಟೋರ್ ರೂಮ್ ನಲ್ಲಿ ಬೇರೆ ಔಷಧಿಗಳು ಮತ್ತು ಒಂದಷ್ಟು ಹಣ ಇತ್ತು. ಅದು ಹೇಗೆ ಇತ್ತೋ ಹಾಗೇ ಇದೆ. ಅಂದ ಮೇಲೆ ಕೋವಿಡ್ ಲಸಿಕೆಗಾಗಿ ಅಂತಲೇ ಕಳ್ಳತನ ನಡೆದಿರೋದು ಖಾತ್ರಿಯಾಗಿದೆ.

ಆಸ್ಪತ್ರೆ ಒಳಗಾಗಲಿ ಹೊರಗಾಗಲಿ ಸಿಸಿ ಕ್ಯಾಮೆರಾಗಳಿಲ್ಲದಿರೋದು ಪೊಲೀಸರ ಕಾರ್ಯಾಚರಣೆಗೆ ಹಿನ್ನಡೆ ಉಂಟು ಮಾಡಿದೆ. ಪೊಲೀಸರು ಯಾರೋ ಒಂದಷ್ಟು ಜನರ ಮೇಲೆ ಕೇಸ್ ಹಾಕಿ ತೆಪ್ಪಗೆ ಕುಳಿತಿದ್ದಾರೆ. ಆಸ್ಪತ್ರೆಯವರು ಸರಿಯಾದ ರೀತಿಯಲ್ಲಿ ಬಂದೋಬಸ್ತ್ ಮಾಡೋದು ಬಿಟ್ಟು ಈ ರೀತಿ ನಿರ್ಲಕ್ಷ್ಯ ಮಾಡಿದರೆ ಅದಕ್ಕೆ ಯಾರು ಹೊಣೆಗಾರರು ಅಂತ ಅವರೇ ಹೇಳಬೇಕು.

ಲಸಿಕೆಗೆ ಸಾಕಷ್ಟು ಡಿಮ್ಯಾಂಡ್ ಇರೋದ್ರಿಂದ ಜಿಂದ್ ಪಿ.ಪಿ. ಸೆಂಟರ್ ನವರೇ ಈ ರೀತಿ ಮಾಡಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಕಳ್ಳತನವಾಗಿದೆ ಅಂತ ಸುಮ್ಮನೆ ಪುಕಾರು ಎಬ್ಬಿಸಿ ಅದಕ್ಕೆ ಸರ್ಕಾರದಿಂದ ವಿಮೆಯನ್ನು ಪಡೆದುಕೊಳ್ಳುವುದು ಅವರ ದುರುದ್ದೇಶವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಯಾವುದು ಸುಳ್ಳೋ ಯಾವುದು ಸತ್ಯವೋ ತನಿಖೆಯಿಂದಲೇ ಗೊತ್ತಾಗಬೇಕು.

Leave a Reply

Your email address will not be published. Required fields are marked *