ಹಾಯ್ ಬೆಂಗಳೂರ್

ಕೋವಿಡ್ ಭೀತಿ ಇರುವಾಗ ಕುಂಭಮೇಳಕ್ಕೆ ಸರ್ಕಾರ ಅದ್ಹೇಗೆ ಅವಕಾಶ ನೀಡಿತೋ?

ಕಳೆದ ಐದು ದಿನಗಳಿಂದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ 1701 ಕೋವಿಡ್ ಪ್ರಕರಣಗಳನ್ನು ಆರೋಗ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆರ್.ಟಿ.ಪಿಸಿಆರ್ ಮತ್ತು Rapid ಆಂಟಿಜೆನ್ ಟೆಸ್ಟ್ ಮೂಲಕ ಇಷ್ಟು ಜನರಲ್ಲಿ ವೈರಸ್ ಇರೋದನ್ನು ಕಂಡು ಹಿಡಿಯಲಾಗಿದೆ.

ಕುಂಭಮೇಳದಲ್ಲಿ ಪ್ರತಿನಿತ್ಯ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದಾರೆ. ಪ್ರಪಂಚದಲ್ಲಿ ಇಂಥ ಪರಿಸ್ಥಿತಿ ಇರೋವಾಗ ಸರ್ಕಾರ ಕುಂಭಮೇಳಕ್ಕೆ ಅವಕಾಶ ನೀಡಬಾರದಾಗಿತ್ತು ಅಂತ ವಿಪಕ್ಷಗಳು ಹೌಹಾರುತ್ತಿವೆ. ಕಳೆದ ಐದು ದಿನಗಳಲ್ಲಿ ಪತ್ತೆಯಾಗಿರುವ 1701 ಪ್ರಕರಣಗಳಲ್ಲಿ ಭಕ್ತಾದಿಗಳಷ್ಟೇ ಅಲ್ಲದೆ ಸಾಧು ಸಂತರು ಕೂಡ ಇದ್ದಾರೆ. ಇವರ ಜೊತೆಗೆ ಅದೆಷ್ಟು ಜನ ಸಂಪರ್ಕದಲ್ಲಿದ್ದರೋ ಅವರೆಲ್ಲಾ ಐಸೊಲೇಟ್ ಆಗಬೇಕಾಗುತ್ತದೆ.

ಹರಿದ್ವಾರದ ಚೀಫ್ ಮೆಡಿಕಲ್ ಆಫೀಸರ್ ಶಂಭುಕುಮಾರ್ ಝಾ ಹೇಳುವ ಪ್ರಕಾರ ಇನ್ನಷ್ಟು ಆರ್.ಟಿ.ಪಿಸಿಆರ್ ವರದಿಗಳು ಬರೋದು ಬಾಕಿ ಇದೆಯಂತೆ. ಅದೇನಾದರೂ ಬಂತು ಅಂದರೆ ಖಂಡಿತವಾಗಿಯೂ ಸೋಂಕಿತರ ಸಂಖ್ಯೆ ಎರಡು ಸಾವಿರ ದಾಟಲಿದೆಯಂತೆ.

670 ಹೆಕ್ಟೇರ್ ಪ್ರದೇಶದಲ್ಲಿ ನಡೆಯುತ್ತಿರುವ ಈ ಪವಿತ್ರ ಆಚರಣೆಯಲ್ಲಿ ಇಲ್ಲೀ ತನಕ ನಲವತ್ತೆಂಟುವರೆ ಲಕ್ಷ ಜನ ಸ್ನಾನ ಮಾಡಿದ್ದಾರೆ. ಅವರಿಗೆಲ್ಲ ಕೋವಿಡ್ ಬಂದು ವಕ್ಕರಿಸಿದರೆ ದೇವರೇ ಗತಿ. ದೇಶ ಇಂಥ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿರುವಾಗ ಅದ್ಹೇಗೆ ಕುಂಭಮೇಳಕ್ಕೆ ಸರ್ಕಾರ ಅವಕಾಶ ಕೊಟ್ಟಿತೋ ಗೊತ್ತಿಲ್ಲ.

Leave a Reply

Your email address will not be published. Required fields are marked *