ಹಾಯ್ ಬೆಂಗಳೂರ್

ಹನುಮಂತ ಹುಟ್ಟಿರೋದು ಏಳು ಬೆಟ್ಟಗಳಿಂದ ಆವರಿಸಲ್ಪಟ್ಟಿರುವ ತಿರುಮಲದಲ್ಲಂತೆ

ರಾಮನ ಭಂಟ ಹನುಮಂತ ಎಲ್ಲಿ ಹುಟ್ಟಿದ್ದು ಅಂತ ಕೇಳಿದರೆ ಎಲ್ಲರೂ ಹೊಸಪೇಟೆಯ ಅಂಜನಾದ್ರಿ ಪರ್ವತವನ್ನು ತೋರಿಸುತ್ತಾರೆ. ಇಷ್ಟು ದಿನ ಅದೇ ನಂಬಿಕೆ ಇತ್ತು. ಆದರೆ ಅದು ಸುಳ್ಳು. ಹನುಮ ಜನಿಸಿದ್ದು ತಿರುಪತಿಯ ತಿರುಮಲದಲ್ಲಿರುವ ಅಂಜನಾದ್ರಿ ಪರ್ವತದಲ್ಲಿ ಅಂತ ಪಂಡಿತರ ತಂಡವೊಂದು ಹೇಳತೊಡಗಿದೆ.

ಹೌದು, ಅನೇಕ ಸಂಶೋಧಕರು ಮತ್ತು ಪಂಡಿತೋತ್ತಮರು ಸುದೀರ್ಘವಾದ ಸಂಶೋಧನೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಅದರಲ್ಲೂ ಗುಂಟೂರಿನ ಪ್ರಸಾದ್ ಎಂಬ ಮಹಾನ್ ಪಂಡಿತರು ಇತ್ತೀಚೆಗೆ ಟಿ.ಟಿ.ಡಿ. ಎಕ್ಸಿಕ್ಯುಟಿವ್ ಜವಾಹರ್ ರೆಡ್ಡಿಯನ್ನು ಸಂಪರ್ಕ ಮಾಡಿ ತಿರುಮಲದ ಅಂಜನಾದ್ರಿ ಬೆಟ್ಟವೇ ಆಂಜನೇಯನ ಹುಟ್ಟಿದ ಜಾಗ ಎಂಬುದಕ್ಕೆ ತನ್ನ ಬಳಿ ಸಾಕಷ್ಟು ಪುರಾವೆಗಳಿವೆ ಎಂದು ಹೇಳುತ್ತಿದ್ದಾರೆ.

ಇದನ್ನು ಅಧ್ಯಯನ ಮಾಡಲಿಕ್ಕೆ ಅಂತಲೇ ಒಂದು ಕಮಿಟಿಯನ್ನು ಟಿ.ಟಿ.ಡಿ. ಮಾಡಿತ್ತು. ಅದು ಕೂಡ ಅಂಜನಾದ್ರಿ ಪರ್ವತ ಅಂತಲೇ ಹೇಳುತ್ತಿದೆ. ಇದಕ್ಕೆ ಯಾರಿಂದಲೂ ಇಲ್ಲೀ ತನಕ ವಿರೋಧ ವ್ಯಕ್ತವಾಗಿಲ್ಲ. ಕಮಿಟಿಯಲ್ಲೇ ಕೆಲವರು ಹನುಮ ಹುಟ್ಟಿದ್ದಾನೆ ಅಂತ ಹೇಳಲಾಗುವ ಇತರೆ ಜಾಗಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅವರು ಹೇಳುವ ಪ್ರಕಾರ ಹನುಮ ಹುಟ್ಟಿರೋದು ಬೇರೆ ಕಡೆ, ಆದರೆ ನೆಲೆಸಿರೋದು ಮಾತ್ರ ತಿರುಮಲದಲ್ಲಂತೆ.

Leave a Reply

Your email address will not be published. Required fields are marked *