ಹಾಯ್ ಬೆಂಗಳೂರ್

ಸರ್ಕಾರಿ ಭೂಮಿ ಗುಳುಂ ಆರೋಪ: ಯಡ್ಡಿ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಾತ್ಕಾಲಿಕವಾಗಿ ಸುಪ್ರೀಂಕೋರ್ಟ್ ರಿಲೀಫ್ ನೀಡಿದೆ. 2012ರಲ್ಲಿ ಲೋಕಾಯುಕ್ತ ಪೊಲೀಸರಿಗೆ ಆಲಂ ಪಾಷಾ ಎನ್ನುವವರ ದೂರನ್ನು ನೀಡಿದ್ದರು. ಅದನ್ನು ಆಧರಿಸಿ ಯಡ್ಡಿ ಮೇಲೆ 24 ಎಕರೆ ಸರ್ಕಾರಿ ಭೂಮಿಯನ್ನು ಗುಳುಂ ಮಾಡಿದ ಆರೋಪದ ಮೇಲೆ ಕೇಸ್ ಜಡಿಯಲಾಗಿತ್ತು. ಅದು ಮೊನ್ನೆ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿತ್ತು.

ಲೋಕಾಯುಕ್ತ ಪೊಲೀಸರು ಫೈಲ್ ಮಾಡಿದ್ದ ಚಾರ್ಜ್ ಶೀಟನ್ನು ಪರಿಗಣಿಸಿ ವಿಚಾರಣೆಯನ್ನು ಮುಂದುವರೆಸಬೇಕು ಅಂತ ಇತ್ತೀಚೆಗಷ್ಟೇ ಲೋಕಾಯುಕ್ತ ವಿಶೇಷ ಕೋರ್ಟ್ ಗೆ ಹೈಕೋರ್ಟ್ ಸೂಚನೆ ನೀಡಿತ್ತು. ಇದರಿಂದ ಯಡಿಯೂರಪ್ಪನವರಿಗೆ ಜಂಘಾಬಲವೇ ಉಡುಗಿ ಹೋದಂತಾಗಿತ್ತು.

ಕಡೆಗೆ ತಮ್ಮ ಪರ ಇರುವ ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ಅವರನ್ನು ಅಖಾಡಕ್ಕಿಳಿಸಿದ ಯಡಿಯೂರಪ್ಪ ವಿಚಾರಣೆ ವಿರುದ್ಧ ಸ್ಟೇ ತರುವುದಕ್ಕಾಗಿ ಸುಪ್ರೀಂಕೋರ್ಟ್ ಮೊರೆ ಹೋದರು. ಇಂದು ಯಡಿಯೂರಪ್ಪ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ವಿಚಾರಣೆಗೆ ತಡೆಯಾಜ್ಞೆ ನೀಡಿದೆ.

ಈ ತಡೆಯಾಜ್ಞೆಯನ್ನು ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ತೆಗೆಸುತ್ತಾರೋ ಅಥವಾ ಹಂಗೆ ಕೇಸ್ ಮುಚ್ಚಿ ಹೋಗುತ್ತೋ ಕಾದು ನೋಡಬೇಕು.

Leave a Reply

Your email address will not be published. Required fields are marked *