ಹಾಯ್ ಬೆಂಗಳೂರ್

ವೀಕೆಂಡ್ ನಲ್ಲಿ ಲಾಕ್ ಡೌನ್ ಮಾಡಲು ಸರ್ಕಾರ ಚಿಂತನೆ

ಬೆಂಗಳೂರಿನಲ್ಲಿ ಕೋರನಾದಿಂದ ಸಾವು ಯಾವ ಪರಿ ಹೆಚ್ಚಾಗುತ್ತಿದೆ ಅಂದರೆ ಸರಿಯಾಗಿ ಶವಗಳನ್ನು ಸುಡೋಕೆ ಸ್ಮಶಾನಗಳಲ್ಲಿ ಜಾಗ ಸಿಗುತ್ತಿಲ್ಲ. ಎಲೆಕ್ಟ್ರಿಕ್ ಗೆ ಕೊಡಬೇಕು ಅಂದರೆ ತಾಸುಗಟ್ಟಲೆ ಕಾಯಬೇಕು. ಬೊಮ್ಮನಹಳ್ಳಿ ಸ್ಮಶಾನದ ಮುಂದೆ ಸಾಲು ಸಾಲು ಆಂಬುಲೆನ್ಸ್ ಗಳು ಕಾಯುತ್ತಾ ನಿಂತಿರೋದನ್ನ ನೋಡಿದರೆ ಮನ ಕಲಕುತ್ತದೆ.

ಬೆಂಗಳೂರಿನಲ್ಲಿ ಪರಿಸ್ಥಿತಿ ಕೈ ಮೀರುತ್ತಿರುವುದರಿಂದ ತಜ್ಞರ ಸಲಹೆಯಂತೆ ವೀಕೆಂಡ್ ಗಳಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಥಿಯೇಟರ್ ಗಳ ಕತೆಯಂತೂ ಕೇಳೋದೇ ಬೇಡ. ವೀಕೆಂಡ್ ಗಳಲ್ಲಿ ಸಂಪೂರ್ಣ ಬಂದ್ ಮಾಡಿ ಉಳಿದ ದಿನಗಳಲ್ಲಿ ಕೇವಲ 30 ಪರ್ಸೆಂಟ್ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ.

ಕೋವಿಡ್ ರೂಲ್ಸ್ ಉಲ್ಲಂಘಿಸಿದರೆ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಎಫ್. ಐ.ಆರ್ ದಾಖಲಿಸಿ ಅಂತ ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಹಾಗಾಗಿ ಈ ಬಾರಿ ಕರಗಕ್ಕೂ ಅನುಮತಿ ನೀಡಿಲ್ಲ. ಅತ್ತ ದೆಹಲಿಯಲ್ಲಂತೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಆಗಿದೆ. ಬಾರ್, ಪಬ್, ಮಾಲ್, ಥಿಯೇಟರ್ – ಇದ್ಯಾವುದಕ್ಕೂ ಅವಕಾಶ ಇಲ್ಲ. ಬಾರು, ಪಬ್ಬೇನೋ ಚೇತರಿಸಿಕೊಳ್ಳುತ್ತವೆ. ಆದರೆ ಥಿಯೇಟರ್ ಮತ್ತು ಮಾಲ್ ಗಳ ಕಥೆ? ದೇವರೇ ಗತಿ.

Leave a Reply

Your email address will not be published. Required fields are marked *