ಹಾಯ್ ಬೆಂಗಳೂರ್

ದನಗಳ ಮೇವಿನ ದುಡ್ಡನ್ನೂ ಬಿಡದೆ ತಿಂದ ಲಾಲೂಗೆ ಕಡೆಗೂ ಸಿಕ್ತು ಜಾಮೀನು

ಮೇವು ಹಗರಣದಲ್ಲಿ ಸಿಗೇಬಿದ್ದು ಇಷ್ಟು ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುತ್ತಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಗೆ ಇಂದು ಮುಕ್ತಿ ಸಿಕ್ಕಿದೆ. ಅರ್ಥಾತ್ ಜಾಮೀನು ಸಿಕ್ಕಿದೆ. ಬಾಜಾ ಭಜಂತ್ರಿ ಮೂಲಕ ಜೈಲಿನಿಂದ ಹೊರಬಂದ ಲಾಲೂ ಖುಷಿಯಿಂದ ಸಿಹಿ ಹಂಚುತ್ತಿದ್ದಾರೆ.

ಅಸಲಿಗೆ ಈ ಮನುಷ್ಯ ಮಹಾನ್ ಚಾಣಾಕ್ಷ. “ಜಬ್ ತಕ್ ರಹೇಗ ಸಮೋಸೆ ಮೆ ಆಲು, ತಬ್ ತಕ್ ರಹೇಗ ಬಿಹಾರ್ ಮೆ ಲಾಲು” ಅಂತ ಧೈರ್ಯವಾಗಿ ಹೇಳಿಕೊಂಡಿದ್ದ ಈತನ ಗುಂಡಿಗೆಗೆ ಸಲಾಮ್ ಹೊಡೆಯಲೇ ಬೇಕು. ಅಷ್ಟು ಚೆನ್ನಾಗಿ ತಿಂದು ತೇಗಿ ಜೈಲು ಸೇರಿದರೂ ಈತನ ಆತ್ಮವಿಶ್ವಾಸ ಎಷ್ಟಿತ್ತು ಎನ್ನುವುದಕ್ಕೆ ಮೇಲಿನ ಸಾಲುಗಳೇ ಸಾಕ್ಷಿ. ಎಲ್ಲಿ ತನಕ ಸಮೋಸದಲ್ಲಿ ಆಲು ಇರುತ್ತದೋ ಅಲ್ಲೀ ತನಕ ಬಿಹಾರದಲ್ಲಿ ಲಾಲೂ ಇರುತ್ತಾನೆ – ಇದು ಮೇಲಿನ ಸಾಲಿನ ಭಾವಾರ್ಥ. ಹೇಗಿದೆ ನೋಡಿ ಲಾಲೂ ದುನಿಯಾ.

ಲಾಲೂ ಮೇಲೆ ಇನ್ನೂ ನಾಲ್ಕೈದು ಕೇಸುಗಳಿವೆ. ಎಲ್ಲವೂ ದುಡ್ಡು ತಿಂದ ಕೇಸುಗಳೇ. ಇಂಥವರಿಗೆ ನ್ಯಾಯಾಲಯವು ಜಾಮೀನು ಯಾಕೆ ಕೊಡುತ್ತದೋ. ಜಾಮೀನು ಪಡೆದು ಬಂದು ಇವರೇನು ದೇಶ ಉದ್ಧಾರ ಮಾಡುತ್ತಾರಾ? ಇನ್ನಷ್ಟು ತಿಂದು ತೇಗುತ್ತಾರೆ ಅಂತ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *