ಹಾಯ್ ಬೆಂಗಳೂರ್

ಮಣಿಪುರದಂಥ ಚಿಕ್ಕ ರಾಜ್ಯಕ್ಕೆ ಹೋಗಬೇಕಾದರೂ ಕೋವಿಡ್ ನೆಗೆಟಿವ್ ರಿಪೋರ್ಟ್ ತೆಗೆದುಕೊಂಡು ಹೋಗಬೇಕು

ಮಣಿಪುರದಂಥ ಚಿಕ್ಕ ರಾಜ್ಯ ಕೂಡ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹಿಡಿದುಕೊಂಡು ಬಂದ್ರೆ ಮಾತ್ರ ನಮ್ಮ ರಾಜ್ಯಕ್ಕೆ ಎಂಟ್ರಿ ಅಂತ ಕಡ್ಡಾಯ ರೂಲ್ಸ್ ಮಾಡಿಬಿಟ್ಟಿದೆ. ಈಗಾಗಲೇ ಎರಡನೆ ಅಲೆಯಿಂದ ಪ್ರತಿನಿತ್ಯ ದೇಶದಲ್ಲಿ ಒಂದು ಮುಕ್ಕಾಲು ಸಾವಿರ ಮಂದಿ ಸಾಯುತ್ತಿದ್ದಾರೆ. ಜೂನ್ ವೇಳೆಗೆ ಪ್ರತಿನಿತ್ಯ ಎರಡು ಕಾಲು ಸಾವಿರದಷ್ಟು ಜನ ಸಾಯುತ್ತಾರೆ ಅಂತ ಅಂದಾಜಿಸಲಾಗಿರುವುದು ಅಲ್ಲಿನ ಸರ್ಕಾರಕ್ಕೆ ಆತಂಕ ತರಿಸಿದೆ. ಹೀಗಾಗಿ ಇಂಥದ್ದೊಂದು ಕಾನೂನು ಮಾಡಿದೆ.

ಕಳೆದ ವರ್ಷ ಕೋವಿಡ್ ಪ್ರಕರಣಗಳು ಹತ್ತು ಸಾವಿರದಿಂದ ಎಂಬತ್ತು ಸಾವಿರ ತಲುಪಲು ಎಂಬತ್ತಮೂರು ದಿನಗಳು ತೆಗೆದುಕೊಂಡಿತ್ತು. ಈಗ ಅದು ಕೇವಲ ನಲವತ್ತು ದಿನಗಳನ್ನು ಮಾತ್ರ ತೆಗೆದುಕೊಳ್ಳುತ್ತಿದೆ. ಅಂದರೆ ಎರಡನೇ ಅಲೆಯ ಕೋವಿಡ್ ಎಷ್ಟು ವೇಗವಾಗಿ ಹಬ್ಬುತ್ತಿದೆ ಅಂತ ನೀವೇ ಊಹಿಸಿಕೊಳ್ಳಿ.

ಇನ್ನೂ ಟೆಸ್ಟಿಂಗ್ ಗೆ ಅಂತಲೇ ನಮ್ಮ ದೇಶ 7.8 ಬಿಲಿಯನ್ ಡಾಲರ್ ಗಳನ್ನು ಖರ್ಚು ಮಾಡಬೇಕಾಗುತ್ತದೆ ಮತ್ತು ಹೆಲ್ತ್ ಕೇರ್ ಮೇಲೆ 1.7 ಬಿಲಿಯನ್ ಡಾಲರ್ ಗಳು ವೆಚ್ಚವಾಗುತ್ತದೆ ಅಂತ ಅಂದಾಜು ಮಾಡಲಾಗಿದೆ.

ಈ ವರ್ಷದ ಏಪ್ರಿಲ್ ತನಕ 45 ವರ್ಷ ಮೇಲ್ಪಟ್ಟವರು ಮಾತ್ರ ಲಸಿಕೆ ಹಾಕಿಸಿಕೊಳ್ಳಬೇಕು ಅಂತ ನಿಯಮ ಇತ್ತು. ಈಗ ಹಾಗಲ್ಲ. ಎಲ್ಲರೂ ಹಾಕಿಸಿಕೊಳ್ಳಬೇಕು ಅಂತ ರೂಲ್ಸ್ ಮಾಡಲಾಗಿದೆ. ಇಲ್ಲಿ ತನಕ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಗೆ ಮಾತ್ರ ಆದ್ಯತೆ ನೀಡಲಾಗುತ್ತಿತ್ತು. ಆದರೆ ಈಗ ಜಾನ್ಸನ್ ಅಂಡ್ ಜಾನ್ಸನ್, ಫೈಜರ್ ಬಯೋಟೆಕ್, ಮಾಡರ್ನಾ – ಹೀಗೆ ಬೇರೆ ದೇಶಗಳ ಮಾರುಕಟ್ಟೆಗಳಲ್ಲಿ ಗ್ರೀನ್ ಸಿಗ್ನಲ್ ಪಡೆದುಕೊಂಡ ಲಸಿಕೆಯನ್ನೂ ಕೂಡ ಹಾಕಿಸಿಕೊಳ್ಳಬಹುದು ಅಂತ ನಿಯಮ ಜಾರಿಗೊಳಿಸಲಾಗಿದೆ.

ಒಟ್ಟಿನಲ್ಲಿ ನಮ್ಮ ದೇಶದ ಸದ್ಯದ ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ಜನರು ಯಾವುದಕ್ಕೂ ಆದಷ್ಟು ಎಚ್ಚರ ವಹಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಸರ್ಕಾರ ಲಾಕ್ ಡೌನ್ ಮಾಡೋದು ಗ್ಯಾರಂಟಿ.

Leave a Reply

Your email address will not be published. Required fields are marked *