ಹಾಯ್ ಬೆಂಗಳೂರ್

ವೀಕೆಂಡ್ ಅಂತ ಮೈಮರೀಬೇಡಿ: ಇಂದಿನಿಂದಲೇ ನೈಟ್ ಕರ್ಫ್ಯೂ ಆರಂಭ

ವೀಕೆಂಡ್ ಅಂತ ಇವತ್ತೇನಾದ್ರು ಮೈ ಮರೆತೀರಾ ಜೋಕೆ. ಯಾಕಂದ್ರೆ ಇವತ್ತಿನಿಂದಲೇ ನೈಟ್ ಕರ್ಫ್ಯೂ ಜಾರಿ. ಯಾವುದೇ ಕಾರಣಕ್ಕೂ ರಾತ್ರಿ ಒಂಬತ್ತು ಗಂಟೆ ಮೇಲೆ ಆಚೆ ಬರೋದಕ್ಕೆ ಹೋಗಬೇಡಿ. ಅಕಸ್ಮಾತ್ ಒಂಬತ್ತು ಗಂಟೆಗೆ ಹೊರಬಂದು ಇನ್ನೂ ಒಂದು ಗಂಟೆ ಕಾಲ ಟೈಂ ಇದೆಯಲ್ಲ ಅಂದುಕೊಂಡಿರೋ ಅಷ್ಟೇ ಮತ್ತೆ. ಬಿ.ಬಿ.ಎಂ.ಪಿ. ಮಾರ್ಷಲ್ ಗಳು, ಪೊಲೀಸರು ಲಾಠಿ ಏಟು ಕೊಡೋಕೆ ಕಾಯ್ತಾ ಇರ್ತಾರೆ.

ಅಂಗಡಿಗಳೂ ಅಷ್ಟೇ ಹತ್ತು ಗಂಟೆಗೆ ಲಾಕ್ ಮಾಡಿಕೊಂಡು ಮನೆ ಸೇರಿಕೊಳ್ಳುತ್ತಾರೆ. ಬಾರು, ಪಬ್ಬು, ರೆಸ್ಟೋರೆಂಟ್ ಗಳು ಹತ್ತು ಗಂಟೆ ಮೇಲೆ ಯಾವುದೇ ಕಾರಣಕ್ಕೂ ಕೆಲಸ ಮಾಡೋದಿಲ್ಲ. ಯಾಕೆಂದರೆ ಈ ಬಾರಿ ಯಾರಿಗೂ ರಿಸ್ಕ್ ತೆಗೆದುಕೊಳ್ಳೋದು ಇಷ್ಟವಿಲ್ಲ.

ಕಳೆದ ಬಾರಿಯಂತೆ ತಲೆಕೆಟ್ಟ ಮೋದಿ ಎಲ್ಲಿದಿರೋ ಅಲ್ಲೇ ಇರೀ, ಗಂಟೆ ಹೊಡೀರಿ, ದೀಪ ಹಚ್ಚಿರಿ ಅಂದರೆ ತಿಥೀನೆ. ಈ ಬಾರಿ ಮಾತ್ರ ದೇಶದ ಪ್ರಜೆಗಳು ಲಾಕ್ ಡೌನ್ ಎಂಬ ಮೂರ್ಖ ಸಲಹೆನಾ ಪಾಲಿಸೋ ಸ್ಥಿತಿಯಲ್ಲಿ ಖಂಡಿತವಾಗಲೂ ಇಲ್ಲ. ಅದರಿಂದ ಏನೂ ಪ್ರಯೋಜನವಿಲ್ಲ ಅನ್ನೋದು ಕಳೆದ ಬಾರಿಯೇ ಸಾಬೀತಾಗಿದೆ.

Leave a Reply

Your email address will not be published. Required fields are marked *